ಅದು ಉರ್ವ ಸ್ಟೋರ್ ಮಂಗಳೊರು ನಗರದ ಚಿಕ್ಕ ಕ್ಷೇತ್ರ . ಆವಾಗ ನಮ್ಮ ಮನೆ ಇದ್ದದ್ದು ದೇರೆಬೈಲು ಎಂಬ ಊರಿನ ಸಮೀಪ. ಮನೆಗೆ ಆವಶ್ಯಕ ಸಾಮಾನು ಬೇಕೆಂದರೆ ಅದು ಸಿಗುತ್ತಿದ್ದದ್ದು ಇಲ್ಲೇ. ಗುರುವಾರದ ಒಂದು ಸಾಯಂಕಾಲ ಮನೆಯ ಸಾಮಗ್ರಿಗಳನ್ನು ಹೊತ್ತುಕೊಂಡು ಹಿರಿಯರೊಂದಿಗೆ ನಡೆದು ಬರುತ್ತಾ ಇದ್ದೆವು. ಉರ್ವ ಸ್ಟೋರ್ ನ ಕೇಂದ್ರ ಭಾಗದಲ್ಲಿರುವ ಆಟದ ಮೈದಾನು ಹಾದು ಹೋದಾಗ ಅಲ್ಲಿ ಬಣ್ಣ ಬಣ್ಣದ ನಾಲ್ಕು ಕಂಬಗಳನ್ನು ತಂದಿರಿಸಿದ್ದರು. ಅದು ಏಕೆ ಎಂದು ತಿಳಿಯದೆ ಹಿರಿಯರಲ್ಲಿ ಕೇಳಿದಾಗ" ಶನಿವಾರ ಇಲ್ಲಿ ಹೋಟೆಲಿನ ಬಟ್ರು ಆಡಿಸುವ ದೇವಿ ಮಹಾತ್ಮೆ ಆಟ ಉಂಟು.."
ಕಿವಿ ನೆಟ್ಟಗಾಯಿತು !! . ಮೊದಲು ಆಟ ಅಂದ್ರೆ ನಮ್ಮ ಶಾಲಾ ವಾರ್ಷಿಕೋತ್ಸವದಲ್ಲಿ ಅಲ್ಪ ಸ್ವಲ್ಪ ನೋಡಿದ ನೆನಪು. ಇದು ಹೇಗಿರಬಹುದು. ಆಟದ ರಂಗಸ್ಥಳದ ಸಿದ್ಧತೆ ಮೂರು ದಿನ ಮುಂಚಿತವಾಗಿಯೇ ಶುರುವಾಗಿತ್ತು. ಕಟೀಲು ಮೇಳದ ರಂಗಸ್ಥಳ ಹೇಳಿದರೆ ಅಷ್ಟೂ ಭವ್ಯವೂ ದಿವ್ಯವೂ ಆಗಿರುತಿತ್ತು.. ವಿದ್ಯುದ್ದೀಪ ಗಳಿಂದ ಕಂಗೊಳಿಸುತ್ತಿತ್ತು. ಅಂತೂ ಇಂತು ಆಟದ ದಿನ ಶನಿವಾರ ಬಂದೆ ಬಿಟ್ಟಿತು ಬೆಳಗ್ಗೆ ಒಂದು ಸಲ ಆಟ ನಡೆಯುವ ಜಾಗಕ್ಕೆ ಹೋಗಿ ನೋಡುವ ಅಸೆ ಆದರೆ ಮನೆಯಿಂದ ಬಿಡಬೇಕಲ್ಲ.. ಬೆಳಗಿನ ಉಪಹಾರದ ಹೊತ್ತಿಗೆ ಅಂದಿನ ಭಾಗವತ ಬಲಿಪ್ಪರು ಸಹ ಕಲಾವಿದನ ಜತೆಗೆ ನಿಧಾನಕ್ಕೆ ನಮ್ಮ ಮನೆಗೆ ಬಂದರು.
ಅವರ ಉಪಾಹಾರ ಎಲ್ಲ ಆದಮೇಲೆ ಹಿರಿಯರಲ್ಲಿ ಕುಶಲೋಪರಿ ಮಾತಾಡುವಾಗ ನನಗೆ ತಿಳಿದದ್ದು ಇವರು ಇಂದಿನ ಭಾಗವತರು ಎಂದು. ನಾನು ಅ ಮಹಾನ್ ವ್ಯಕ್ತಿಯನ್ನು ನೋಡುವುದೇ ಪ್ರಥಮ. ನಾವೆಲ್ಲ ಚಿಣ್ಣರು ನಮ್ಮಲ್ಲಿ ಅವರಿಗೆ ಮತಾಡುವಂತಹ ವಿಷಯವೇನೂ ಇಲ್ಲ ಮೇಲಾಗಿ ಘನಗಂಭೀರವಗಿರುತ್ತಿದ್ದ ಅವರ ಸ್ವರೂಪ ನೋಡಿ ನಾವು ಸ್ವಲ್ಪ ಭಯದಿಂದಲೇ ಅವರನ್ನು ಕಾಣುತ್ತಿದ್ದೆವು. ಕಟೀಲು ಮೇಳದ ಆಟ ಮಂಗಳೂರಿನ ಸುತ್ತ ಮುತ್ತ ಎಲ್ಲೇ ಆಗಲೀ ಅವರು ಸಾಧಾರಣವಾಗಿ ನಮ್ಮಲ್ಲಿಗೆ ಬರುತ್ತಿದ್ದರು. ಆದರೆ ನನ್ನ ನೆನಪಿನಲ್ಲಿ ನಾನು ಅವರನ್ನು ನೋಡಿದ್ದು ಅಲ್ಲೇ ಮೊದಲು.. ಬಾಲ್ಯದಲ್ಲಿ ನಮ್ಮ ಮನೆ ಕಾರಣಾಂತರದಿಂದ ಹಲವು ಕಡೆ ಬದಲಾವಣೆ ಆಗುತ್ತಿತ್ತು. ಅದು ಸಹ ಕಾರಣವಿದ್ದಿರಬಹುದು. ಸಾಯಂಕಾಲದ ವರೆಗೆ ಬಲಿಪ್ಪರು ನಿದ್ದೆ ಮಾಡಿ ಮತ್ತೆ ಎದ್ದು ಅವರ ತಾಂಬುಲ ಪೆಟ್ಟಿಗೆಯ ತೆರೆದರು ಅದುವೆ ಒಂದು ಅದ್ಭುತ ಕಂಡಿತು . ಅದರಲ್ಲಿ ಅಡಿಕೆ ಹೋಳು ಎಲೆ ಇತ್ಯಾದಿ ಇಡಲು ಪ್ರತ್ಯೇಕ ಕವಾಟಗಳು ಇದ್ದ ಸ್ಟೀಲ್ ನ ಪುಟ್ಟ ಪೆಟ್ಟಿಗೆಯಾಗಿತ್ತು. ಮತ್ತೆ ಕೆಲವು ಹೊತ್ತು ಅದರ ಸಿದ್ಧತೆ, ಬಹುಶ: ರಾತ್ರೆಯ ಸಿದ್ಧತೆಗೆ ತೊಡಗಿಕೊಂಡರು.
ಸ್ವಲ್ಪ ಹೊತ್ತಿನಲ್ಲೇ ಸ್ನಾನಾದಿಗಳನ್ನು ಮುಗಿಸಿ ಸಹಕಲಾವಿದನೊಂದಿಗೆ ಹೊರಟು ನಿಂತು ನಮ್ಮಲ್ಲಿ ಮಕ್ಕಳಲ್ಲಿ ತನ್ನ ಗೊರ ಗೊರ ಸಹಜ ಧ್ವನಿಯಲ್ಲಿ ಕೇಳಿದರು " ಆಟಕ್ಕೆ ಬರಲಿಕ್ಕೆ ಉಂಟ?" ನಮಗೆ ಖುಷಿಯೋ ಖುಷಿ .
ಬಲಿಪ್ಪರು ಹೋಗಿ ಮುಸ್ಸಂಜೆಯಗುತ್ತಿದ್ದಂತೆ ಚೆಂಡೆಯ ಸದ್ದು ಕೇಳಲಾರಂಭಿಸಿತು ನಾವು ಗಾಬರಿಯಾದೆವು. ಆಟ ಶುರುವಾಯಿತೋ ಹೇಗೆ? ಮತ್ತೆ ನಮ್ಮಜ್ಜಿ ಹೇಳಿದರು ಅದು ಕೇಳಿ ಅಂಥ ಬಡಿಯುದು. ಊರವರಿಗೆ ಆಟ ಉಂಟು ಅಂಥ ಗೊತ್ತಾಗೋದೇ ಆಗ.
ಕತ್ತಲೆಯಾಗುವ ಮೊದಲೇ ಹೋಗಲು ಅಣಿಯಾಗಬೇಕಲ್ಲ? ತೆಂಗಿನ ಮಡಲಿನ ಸೂಟೆ ಸಿದ್ದ ಮಾಡುವ ಕಾಯಕ ನಮಗೆ.. ಅದನ್ನೂ ಸಿದ್ದ ಮಾಡಿ ಊಟ ಎಲ್ಲ ಮುಗಿಸಿ ಒಂದು ಬಟ್ಟೆ ಚಾಪೆ.. ಇದು ಅಜ್ಜಿ ಸಿದ್ದ ಮಾಡಿ ಕೊಟ್ಟದ್ದು ಹಿಡಕೊಂಡು ನಂತರ ನಮ್ಮೊಂದಿಗೆ ಅಜ್ಜಿಯೂ ಹೊರಟರು. ದಾರಿಯಲ್ಲಿ ಸಿಕ್ಕಿದ ಪರಿಚಿತರಿಗೆ ಗತ್ತಿನಲ್ಲಿ ಹೇಳಿದವು ..." ಆಟೋಗು ಪೋಪುನೆ."
ಹೋದಾಗ ಕೋಡಂಗಿಗಳು ಕುಣಿಯುತ್ತ ಇದ್ದರು.ಏನೇನೊ ತಮಾಷೆಗಳನ್ನು ತೋರಿಸುತ್ತಾ ಮುಂದೆ ಕುಳಿತ ಮಕ್ಕಳನ್ನು ರಂಜಿಸುತ್ತ.. ಕುಣಿಯುತ್ತಿದ್ದರು. ನಾವು ಒಂದು ಕಡೆ ಚಾಪೆ ಹಾಸಿ ಕುಳಿತುಕೊಂಡೆವು. ತುಸು ಹೊತ್ತಿನಲ್ಲಿ ಬಾಲ ಗೋಪಾಲ ವೇಷ ಬಂತು. ಅನಂತರ ಶಂಖ ಜಾಗಟೆಯ ಶಬ್ದದೊಂದಿಗೆ ಚೌಕಿಯಿಂದ ದೇವರನ್ನು ಹೊತ್ತುಕೊಂಡು ಬಂದರು. ರಂಗಸ್ಥಳದಲ್ಲಿ ಪೂಜೆ ಆಗಿ ನೆನೆಯಿರೋ ಜನರರೆಲ್ಲ ಗುಣಯುತಗೆ ... ಅಂತ ಭಾಗವತರು ಪದ ಹೇಳಿದರು. ದೇವರ ನಿರ್ಗಮನವಾದಮೇಲೆ. ಮತ್ತೆ ಸ್ವಲ್ಪ ಹೊತ್ತು ಕುಣಿದು ಬಾಲಗೋಪಾಲ ಕೋಡಂಗಿ ತ್ಹೊಂಕ ತ್ಹೊಂಕ ದಿನತ್ಹೊಂ ಅಂತ ತಾವು ನಿರ್ಗಮಿಸಿದರು.. ಮತ್ತೆ ಚಿಕ್ಕ ಪ್ರಾಯದ ಬಾಲೆ ಚದುರೆ ಅಂಥ ೨ ಸ್ತ್ರಿ ವೇಷದ ಪ್ರವೇಶ.. ಹಾಸ್ಯಗಾರ ಬಂದ ಆಹೂಹು ದಕ್ಕಿತ್ತೋ ದಕ್ಕಿತ್ತು ಕಾರ್ಯಕ್ರಮ ಮುಗಿದು.. ಪೀಠಿಕೆ ಶುರುವಾಯಿತು ನಿಡ್ಲೆ ಅಜ್ಜನೊಂದಿಗೆ ಬಲಿಪ್ಪರು ಬಂದರು ನಿಡ್ಲೆ ಅಜ್ಜನನ್ನು ನೋಡುವುದು ಅದು ಶುರು. ಸಣಕಲು ಆಗಿದ್ದ ಅವರು ಅದು ಹೇಗೆ ಅ ಚೆಂಡೆಯನ್ನು ಹೆಗಲಲ್ಲಿ ಹೊರುತ್ತಾರೆ ಎಂಬುದೇ ನಮಗೆ ಸೋಜಿಗ.. ತಾಮ್ರದ ಮಡಕೆಯ ಶಬ್ದ ಚೆಂಡೆಯಿಂದ ಹೊರಹೊಮ್ಮಿದಾಗ ನಮಗೆಲ್ಲ ಸಂಭ್ರಮವೋ ಸಂಭ್ರಮ. ...
ಪೀಠಿಕೆ ಮುಗಿದು ಕಟ್ಟುವೇಶ ಪ್ರವೇಶ ಆಯಿತು.. ಒಂದು ಥರದ ಸ್ತ್ರೀ ಪುರುಷ ಎರಡನ್ನೂ ಬಿಂಬಿಸುವ ವೇಷಗಳು ವೀರರಸದ ಪದ್ಯದೊಂದಿಗೆ ಕುಣಿದು.. ಅನಂತರ .. ಬಲಿಪ್ಪರ ಕಂಠದಿಂದ ಹೊಮ್ಮಿದ ಅಂಬುರಹ ದಳ ನೇತ್ರೆ ಕೇಳಿ ಆಶ್ಚರ್ಯ ಬಲಿಪ್ಪರ ಮಾತಾಡುವಾಗ ಗೊರ ಗೊರ ಮಾತಾಡಿದರೂ ಮೈಕವನ್ನು ಮೀರಿಸಿದ ಅವರ ಈಗಿನ ಸ್ವರ ಕೇಳಿ. ! ತ್ರಿಮೂರ್ತಿಗಳೊಂದಿಗೆ ದೇವಿಯ ಪ್ರವೇಶ.. ಅಜ್ಜಿ ಹೇಳಿದ್ರು ನೋಡು ಪುರುಷ ಬಟ್ರ ದೇವಿ.. ಸಾಕ್ಷಾತ್ ದೇವಿಯೇ ..ಎದ್ದು ಬಂದಂತಿತ್ತು.. ಅನಂತರ ಮಧು ಕೈಟಭ ಸಭೆಯಲ್ಲಿ ಪ್ರವೇಶ ...ಮಹಿಷಾಸುರ.. ಪ್ರವೇಶ.. ಇದನು ಒಂದು ಅರ್ಧ ಗಂಟೆ ಅವಧಿ .. ಮಹಿಷಾಸುರ ವಧೆಗೆ ದೇವಿ ಪ್ರವೇಶ.. ಇದೆಲ್ಲ ಒಂದು ಅದ್ಭುತ ಲೋಕವನ್ನೇ ತೆರೆದಿಟ್ಟಿತು.. ಹಿಮ್ಮೇಳ ವೇಷದವರು.. ಪ್ರತಿಯೊಬ್ಬರೂ ಭಾಗವತರ ನಿರ್ಧೇಶನದಂತೆ ನಡೆಯುವುದು ನೋಡಿದಾಗ ಶಿಸ್ತಿನ ಸಿಪಾಯಿಗಳಂತೆ ತೋರುತಿದ್ದರು. ಬೆಳಗ್ಗೆಯವರೆಗೂ ಬಲಿಪ್ಪರು ಒಂದೇ ಏರು ಕಂಠದಿಂದ ಹಾಡುವುದು ನೋಡಿದಾಗ ಈಗಿನ ಯಾವ ಸ್ಟಾರ್ ಭಾಗವತರೂ ಅ ಮಟ್ಟಕ್ಕೆ ಎರಲಾರರು. ನಿಡ್ಲೆ ಅಜ್ಜನ್ನ ಚೆಂಡೆ . ..ಅವಾಗ ಅವರ ಶಿಷ್ಯ ವೃಂದ ಕೂಡ ದೊಡ್ಡದಿತ್ತು.. ಅಂಥ ಕೇಳಿದ್ದೆ.. ಕುರುಪ್.. ಪೆರುವೋಡಿ.. ಇವರೆಲ್ಲ ಮೇಳದಲ್ಲಿ ಅವರ ಜತೆಗೆ ಇರುತ್ತಿದ್ದರು.. ಅಂತೂ ಅ ದಿನಗಳು ಕಳೆದುವು ಹಸಿ ಹಸಿ ನೆನಪನ್ನು ಬಾಳಿನುದ್ದಕ್ಕೂ ನೀಡುತ್ತಾ ಗತಿಸಿದುವು. ಇಗಲೂ ಊರಿಗೆ ಹೋದಾಗ ಕಟೀಲು ಮೇಳದ ಆಟದ ಬ್ಯಾನರ್ ನೋಡಿದಾಗ ಅ ನೆನಪಿನ ವರ್ತುರಲಿದಿಂದ ಹೊರಬರಲಾಗದೆ ತಳಮಳಿಸಿದ್ದಿದೆ. ಅವಾಗ ಕಟೀಲು ಮೇಳ ಒಂದೇ ಆಗಿದ್ದುದ್ದು ಮತ್ತೆ ಎರಡಾಯಿತು ನಾಲ್ಕಾಯಿತು.. ೪೦ ವ ರ್ಷಗಳಿಗೂ ಹೆಚ್ಚು ಬಲಿಪ್ಪರ ಸೇವೆಯೂ ಸಂದಿತು.. ಬಹುಶ: ಒಬ್ಬ ಕಲಾವಿದ ಒಂದು ತಂಡದೊಂದಿಗೆ ಇಷ್ಟು ದೀರ್ಘ ಸಮಯ ಇದ್ದದ್ದು ಬೇರೆ ಎಲ್ಲೂ ಇಲ್ಲವೇನೋ.
intha aatagaLannu nodalu sikkiddu nijakkoo nimma adrustave sari.. namagella intha aatgaLa bagge kELi maatra gottu!
ReplyDeleteodalu tumba interesting agi iththu.... Idee atakke baliparobbare bhagavathigena??? Aatakke horaduva tayarisa bahala chennagiththu... soote, chape ella hidkondu hogodu...:)
ReplyDeletethanks all
ReplyDeletemodalu peetikege pradhana bhagavatharu kulitare belagge mangaladavarege obbare bhagavathike maduttiddaru.. nanu balipparallade kadathoka.mandecha, kundechcha heege maduvudannu nodiddene.
nanu 2001 ralli Sullia Busstand nalli HOsamoole Ganesh Bhat idee ratre obbare bhagavatike madiddannoo nodiddene. adannu nodidaga nanage anisiddu eeginavarigoo aa capacity ide. adare "jana change keltare !" anta 4 jana bhagavartaranna navu ondu ratriya atakke karesteve !!
ReplyDeletevery nice write up
ReplyDelete