Thursday, November 8, 2012
ಬಲಿಪ್ಪಜ್ಜ ಬರುತ್ತಿದ್ದಾರೆ
ಈಗ ಎರಡು ದಿನ ಮೊದಲು ಮಿತ್ರ ನರಸಿಂಹ ಭಟ್ ಬೇಟಿಯಾಗಿ
ಯಕ್ಷಗಾನ ತಾಳ ಮದ್ದಲೆ ಕಾರ್ಯಕ್ರಮದ ಬಗ್ಗೆ ಹೇಳಿ ಚಕಿತ ಗೊಳಿಸಿದರು. ಚಕಿತನಾಗುವುದಕ್ಕೆ ಕಾರಣ
ಬೇರೇನೂ ಅಲ್ಲ. ನರಸಿಂಹಣ್ಣ ಬಲಿಪ್ಪರ ಬಗ್ಗೆ ಅಪಾರವಾದ ಅಭಿಮಾನವನ್ನೂ ಗೌರವವನ್ನು
ಇಟ್ಟುಕೊಂಡವರು. ಹಾಗಾಗಿ ಅವರ ಯೋಜನೆ ಇದ್ದರೆ
ಅದು ಹೇಗಿರಬಹುದು ಎಂಬ ಊಹನೆಯೇ ನನ್ನನ್ನು ಚಕಿತನನ್ನಾಗಿ ಮಾಡಿದ್ದು. ಹಲವು ದಿನಗಳಿಂದ
ಯೋಚನೆಯಾಗಿಯೇ ಇದ್ದ ನನ್ನ ಯೋಜನೆ ಅವರು ದಿಢೀರನೆ ಕಾರ್ಯರೂಪಕ್ಕೆ ತಂದಿದ್ದರು. ವೇಳೆ ದಿನಾಂಕ
ಸ್ಥಳ ಹೀಗೆ ಪ್ರಾಧಮಿಕವಾದ ಎಲ್ಲಾ ಸಿದ್ದತೆಯಲ್ಲಿಯೇ ಬಂದಿದ್ದರು. ಹಿರಿಯ ಕಲಾವಿದರಾದ ಶ್ರೀ
ಪ್ರಭಾಕರ ಜೋಷಿ, ಶ್ರೀ ಉಮಾಕಾಂತ್ ಭಟ್, ಜಬ್ಬಾರ್ ಸಮೋ ಇವರನ್ನೇಲ್ಲ ಒಪ್ಪಿಸಿ ಕಾರ್ಯಕ್ರಮದ
ರೂಪುಷೆಯ ಬಗ್ಗೆ ಚರ್ಚಿಸುವ ಉದ್ದೇಶದಲ್ಲಿ ನನ್ನ ಬಳಿಗೆ ಬಂದಿದ್ದರು. ಹಾಗೆ ನೋಡಿದರೆ ನನ್ನಲ್ಲಿ
ಚರ್ಚಿಸುವಂತಹುದೇನೂ ಇರಲಿಲ್ಲ. ಯಾಕೆಂದರೆ ಹಲವಾರು ಸಾರ್ವಜನಿಕ ಕಾರ್ಯಕ್ರಮ ಮಾಡಿ ಅನುಭವ
ಇದ್ದವರು ನರಸಿಂಹಣ್ಣ. ಈಗ ತನ್ನೆಲ್ಲ ತೊಂದರೆಗಳನ್ನು ಲೆಕ್ಕಿಸದೇ ಉತ್ಸಾಹಿತರಾದದ್ದು ಯಾರೂ
ಅಭಿಮಾನಿಸಬೇಕಾದದ್ದೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸುವುದೆಂದರೆ ಅದು
ಸುಲಭವಲ್ಲ. ಆದರೂ ಉತ್ಸಾಹ, ಅದೇ ಯೋಚನೆಯಲ್ಲಿ ಹೇಳಿದರು, ಎಲ್ಲರೀಗೂ ಒಂದು ಮೇಲ್ ಮುಖಾಂತರ
ಸುದ್ದಿ ತಿಳಿಸಿಬಿಡಿ. ಇನ್ನು ಯಾರಾದರೂ ಕಾರ್ಯಕ್ರಮ ಅದೇ ದಿನ ನಿಶ್ಚಯ ಮಾಡಿದರೆ? ಬಹುಷಃ ಅವರು ಈ ರೀತಿ ಗಾಬರಿ ಮತ್ತು ಕಾಳಜಿ ವ್ಯಕ್ತ
ಪಡಿಸದೇ ಇರುತ್ತಿದ್ದರೆ ನಾನು ಇದನ್ನು ಬರೆಯುತ್ತಿದ್ದೆನೋ ಇಲ್ಲವೋ ತಿಳಿಯದು. ಅವರ ಈ ಬಗೆಯ
ಚಿಂತನೆ ಮಾತ್ರ ನನ್ನನ್ನು ಗಾಢವಾಗಿ ಯೋಚಿಸುವಂತೆ ಮಾಡಿತು. ಜಾಗ್ರತರಾಗಿ ಯಾವ ಜಾಗರೂಕತೆಯನ್ನು ಹೇಗೆ
ತೆಗೆದುಕೊಂಡರು ನಮ್ಮ ವ್ಯವಸ್ಥೆ ಇನ್ನೂ ರಾಜಕೀಯ ಮುಕ್ತವಾಗಿಲ್ಲವಲ್ಲ ಎಂದು ಬೇಸರಿಸುಂತಾಯಿತು.
ಹಿಂದೂಮ್ಮೆ ಬರೆದಿದ್ದೆ. ಕಾರ್ಯಕ್ರಮ ಯಶಸ್ಸಿನಲ್ಲಿ ಈ ರಾಜಕೀಯದ ಪ್ರಭಾವವೂ ಸಾಕಷ್ಟಿದೆ. ಅದೂ
ಬೆಂಗಳೂರಿನಂತಹ ಸೀಮಿತ ಪ್ರೇಕ್ಷಕ ವಲಯದಲ್ಲಿ ಅತ್ಯಂತ ಹೆಚ್ಚು ಜೀವಂತವಾಗಿರಬೇಕಾದರೆ, ಅದು, ಅದು
ಮಾತ್ರ ಚಿಂತಿಸುವ ಹಾಗೆ ಮಾಡಿದ್ದು. ">ಹಿಂದೆ ರಾಜ ಮಹಾರಾಜರುಗಳು ರಾಜ್ಯ ಉದ್ದಾರಕ್ಕಾಗಿ,
ಪ್ರಜಾಕ್ಷೇಮಕ್ಕಾಗಿ ಮಂತ್ರಾಲೋಚನೆ ಮಾಡಿಕೊಂಡು ರಾಜ ನೀತಿಯನ್ನು ಪಾಲಿಸುತ್ತ ಆಳ್ವಿಕೆ
ನಡೆಸುತ್ತಿದ್ದರೆ ಅದೇ ರಾಜಕೀಯ ಎಂದು ಸಾಮಾನ್ಯರಿಂದಲೂ ಗುರುತಿಸಲ್ಪಡುತ್ತಿತ್ತು. ಅಂತಹ ಗೌರವ
ಭಾವದ ಹಿರಿತನದ ಪ್ರಕ್ರಿಯಯ ಭಾವವೇ ಇಂದು ಬದಲಾಗಿಬಿಟ್ಟು ಅದು ಯಕ್ಷಗಾನಕ್ಕೂ ಹಬ್ಬಿ ಅಭಿಮಾನಿಗಳ
ನಿದ್ದೆಗೆಡಿಸುವುದು ಸುಳ್ಳಲ್ಲ. ಯಕ್ಷಗಾನ ಮೊದಲೆ ನಿದ್ದೆಗೆಡುವ ಕಲೆ ಅದರಲ್ಲಿ ಕಣ್ಮನ
ಪಾವನವಾದರೆ ಇದರಲ್ಲಿ ಮಂಡೆಯೇ ಹಾಳಾಗಿ ಬಿಡ್ತದೆ.ನಾವು ಯಕ್ಷಗಾನ ದೃಷ್ಟಿಯಲ್ಲಿಟ್ಟು ಕಾರ್ಯಕ್ರಮ
ರೂಪಿಸಬೇಕು. ಪ್ರೇಕ್ಷಕರನ್ನು ಆನಂತರ ಗಮನಿಸಬೇಕು” ನನ್ನ ಅನಿಸಿಕೆ ಹೇಳಿದೆ. ಅದಕ್ಕೆ
ಕಾರಣವಿಷ್ಟೆ. ಒತ್ತಾಯದಿಂದ ಪ್ರೇಕ್ಷಕರನ್ನು ಸೆಳೆಯುವ ಕ್ರಮ ಸರಿಯಲ್ಲ. ಅಭಿಮಾನ ಇದ್ದವರು
ಅಭಿರುಚಿ ಬೆಳೆಸಿಕೊಂಡವರು ಬಂದರಷ್ಟೇ ಕಾರ್ಯಕ್ರಮ ಅರ್ಥಪೂರ್ಣ ಎನಿಸುವುದು. ಕಲೆಯನ್ನು ಮನಸ್ಸಿಗೆ
ಮುದನೀಡುವುದಕ್ಕಾಗಿ ಅನುಭವಿಸಬೇಕೇ ಹೊರತು ಯಾತನೆ ಅನುಭವಿಸುವುದಕ್ಕಾಗಿ ಅಲ್ಲ. ಬಹುಷಃ
ಚಿಕಿತ್ಸೆಯ ರೂಪದಲ್ಲಿ ಕೆಲವೊಮ್ಬಲವಂತದಲ್ಲಿ
ಯಾತನೆ ಅನುಭವಿಸುವುದುಂಟು. ಆ ರೀತಿಯಲ್ಲಿ ಅನುಭವಿಸಬೇಕೆ? ಎಷ್ಟೋ ಬಾರಿ ಕಾರ್ಯಕ್ರಮಕ್ಕೆ ಹೋದಾಗ
ಕಂಡದ್ದಿದೆ ಸಂಘಟಕರ ಮೇಲಿನ ದಾಕ್ಷಿಣ್ಯಕ್ಕೆ ಹಲವರು ಕಾರ್ಯಕ್ರಮಕ್ಕೆ ಬಂದಂತೆ ಮಾಡಿ ಅಸಹನೆ
ಸ್ವತಹ ಅನುಭವಿಸುವುದಲ್ಲದೆ ಪರರಿಗೂ ಅದನ್ನು ವರ್ಗಾಯಿಸಿಬಿಡುತ್ತಾರೆ. ಈ ನಿಟ್ಟಿನಲ್ಲಿ ಕಲೆಗೆ
ಅದರಲ್ಲೂ ಯಕ್ಷಗಾನಕ್ಕೆ ಒತ್ತಾಯದ ಪ್ರೇಕ್ಷಕನ ಅಗತ್ಯವಿದೇಯೇ? ಸಂಖ್ಯೆಯಲ್ಲಿ ಪ್ರೇಕ್ಷಕ
ಇರುವುದಕ್ಕಿಂತ ಇರುವ ಪ್ರೇಕ್ಷಕ ಸ್ವತಂತ್ರವಾಗಿ ಅನುಭವಿಸುವಂತೆ ಇರಬೇಕು. >ಬೆಂಗಳೂರಿನಂತಹ ನಗರದಲ್ಲಿ ಯಕ್ಷಗಾನಕ್ಕೆ ಬಹಳ ಸೀಮಿತ
ಪ್ರೇಕ್ಷಕ ಸಂಖ್ಯೆ ಇರುತ್ತದೆ. ಇದನ್ನು ನೋಡುವುದಕ್ಕೆ ಕೇಳುವುದಕ್ಕೆ ಕೇವಲ ಅಭಿಮಾನ ಮಾತ್ರ
ಇದ್ದರೆ ಸಾಲದು ಸಾಕಷ್ಟು ಶ್ರದ್ದೆ ಮತ್ತು ಪ್ರಯತ್ನವನ್ನೂ ಹಾಕಬೇಕಾಗುತ್ತದೆ. ಈ ಬಗೆಯಲ್ಲಿ
ಯಾವುದೇ ಕಾರ್ಯಕ್ರಮಕ್ಕೆ ಸದಾ ಹೋಗುತ್ತಿದ್ದರೆ ನಮ್ಮ ಅಭಿಮಾನ ಪ್ರೀತಿ ಲೆಕ್ಕಕ್ಕೆ ಬರುವುದು
ಆನಂತರ. ನಮಗೆ ಅರಿವಿಲ್ಲದೆಯೇ ಕಾರ್ಯಕ್ರಮ ನೀಯೋಜಕರು ಸೃಷ್ಟಿಸಿದ ಪ್ರೇಕ್ಷಕ ಲೆಕ್ಕಕ್ಕೆ ನಾವು
ಸೇರಿಕೊಳ್ಳುತ್ತೇವೆ. ಅಂದರೆ ಅವರಿಂದಾಗಿ ನಾವು ಯಕ್ಷಗಾನ ಪ್ರೇಕ್ಷಕರಾದ ಭಾವನೆ
ಉಂಟಾಗಿಬಿಡುತ್ತದೆ. ಇದೊಂದು ರೀತಿಯ ರಾಜಕೀಯಕ್ಕೆ ಕಾರಣವಾಗುವುದು ಮಾತ್ರ ವಿಪರ್ಯಾಸ. ತಮ್ಮ
ಪ್ರೇಕ್ಷಕ ವರ್ಗ ಎಂಬ ಅನಧಿಕೃತ ಮುದ್ರೆ ನಮಗರಿವಿಲ್ಲದೆಯೇ ಬಿದ್ದುಬಿಡುತ್ತದೆ.ಬೀದಿಯಲ್ಲಿ ಸ್ವತಂತ್ರವಾಗಿ ಹೋಗುತ್ತಿರುವ
ಗ್ರಾಹಕನನ್ನು ವರ್ತಕರಿಬ್ಬರು ತಮ್ಮ ಸ್ಪರ್ಧೆಗೆ ಬಳಸಿಕೊಂಡಂತೆ. ಇದು ಒಂದು ರೀತಿಯಲ್ಲಿ
ಪ್ರೇಕ್ಷಕರಿಗಾಗಿ ರಾಜಕೀಯವಾಗುವುದು.ಹೀಗಾಗಿ ನನ್ನ ಯೋಚನೆ ಯಕ್ಷಗಾನ ಕಾರ್ಯಕ್ರಮಗಳು
ಆಹ್ವಾನವಾಗದೇ ಸೂಚನೆಯಾದರೆ ಹೇಗೆ? ಯಾಕೆಂದರೆ ಕರೆಯದೇ ಇದ್ದರೂ, ಸೆಳೆಯುವಂತಹ ಚುಂಬಕ ಶಕ್ತಿ
ಯಕ್ಷಗಾನದಲ್ಲಿ ಇದೆ ಎಂಬ ವಿಶ್ವಾಸ ನನ್ನದು. ಬರೀ ಚೆಂಡೆಯ ಸದ್ದಿಗೆ ನಿಮಿರಿಸುವ ಕಿವಿ ಇದೆಯಲ್ಲ?
ನಾವು ನಮ್ಮ ಕೆಲಸ ಮಾಡುವುದು.. ಅದರ ಸೂಚನೆ ಮಾತ್ರ, ಅಸಕ್ತಿಯಿದ್ದವರು ಸುಮ್ಮನೆ ಕುಳಿತಿರಲು ಸಾಧ್ಯವೇ?
ನಿಮಿರುವ ಕಿವಿ ಅರಳುವ ಮನ ತಣಿಯುವ ಹೃದಯ ವ್ಯಕ್ತವಾಗುವ ಅಭಿಮಾನ ಇಷ್ಟಿದ್ದರೆ
ಅರ್ಥಪೂರ್ಣವಾಗುತ್ತದೆ. ಯಕ್ಷಗಾನದಿಂದ ಪ್ರಚೋದಕನಾಗುವ ಪ್ರೇಕ್ಷಕ, ಪ್ರೇಕ್ಷಕನಿಂದ ಪ್ರಚೋದನೆಯಾಗುವ
ಕಲಾವಿದ ಈ ಸಮತ್ರಿಕೋನದ ಮಧ್ಯೆ ವಿಜ್ರಂಭಿಸುವ ಕಾರ್ಯಕ್ರಮ ಬರೀ ಕಾರ್ಯಕ್ರಮವಾಗುವುದಿಲ್ಲ. ಕಲೆಯ
ಆರಾಧನೆ ಎಂದಾಗುವುದು ಆಗಲೇ. ಭಕ್ತ ತಾನಾಗಿ ದೇವಾಲಯಕ್ಕೆ ಬಂದು ಪೂಜೆಯನ್ನು ಕೈಗೊಂಡಾಗಲೇ ಅದು
ನಿಜವಾದ ಪೂಜೆಯಾಗುವುದು. ಆವಾಗ ಬಂದ ಪ್ರೇಕ್ಷಕ ಅಪ್ಪಟ ಯಕ್ಷಗಾನ ಪ್ರೇಕ್ಷಕನಾಗಿ ಕಾರ್ಯಕ್ರಮ
ಮತ್ತಷ್ಟೂ ಅರ್ಥ ಪೂರ್ಣವಾಗುತ್ತದೆ. ವೈಯಕ್ತಿಕ ಹಿತಾಸಕ್ತಿ , ರಾಜಕೀಯದ ದ್ವೇಷ ವೈಷಮ್ಯಗಳು
ಯಕ್ಷಗಾನದ ವಿಚಾರದಲ್ಲಿ ಬದಿಗೆ ಸರಿದು ನಿಲ್ಲಬೇಕು. ಸಹೋದರತ್ವದ ಸಾಹೋದರ್ಯದಲ್ಲಿ ಯಕ್ಷಗಾನ
ಇವೆಲ್ಲವನ್ನು ಮೀರಿ ನಿಲ್ಲಬೇಕು. ಯಕ್ಷಗಾನ ತನ್ನ ಉಳಿವಿಗೇ ಹೋರಾಡುವಂತಹ ಸನ್ನಿವೇಶದಲ್ಲಿಈ ಚಿಲ್ಲರೆ ರಾಜಕೀಯಗಳು ಕಲೆಗೆ
ಪ್ರತಿಬಂಧಕಗಳಾಗಬಾರದು.ಸುಸಂಸ್ಕೃತ ನಾಡಿನ
ಸಾಂಸ್ಕೃತಿಕ ಶ್ರೀಮಂತಿಕೆಈ ಮೂಲಕ ಬಿತ್ತರಗೊಳ್ಳಬೇಕು.ಯಕ್ಷಗಾನ
ಪರಂಪರೆಯ ರಸಧಾರೆಯಲ್ಲಿ ಈ ರಾಜಕೀಯ ದ್ವೇಷಾಸೂಯೆಗಳೆಂಬ ಮಾಲಿನ್ಯ ಬದಿಗೆ ನಿಂತು ಪರಿಶುಭ್ರ
ಪ್ರವಾಹ ಹರಿಯಬೇಕು. ಎಲ್ಲವನ್ನೂ ಮರೆತು ಇದೀಗ ಮೈ ಮನ ಪುಳಕಿತರಾಗುವ
ಸನ್ನಿವೇಶ ಬಂದಿದೆ. ನಮ್ಮ ಬಲಿಪ್ಪಜ್ಜ ಬರುತ್ತಿದ್ದಾರೆ.
ವರ್ಷಾಂತ್ಯದ ಚಳಿಗಾಲದ ಸಮಯ. ರೋಮ ರೋಮಗಳೂ ಸೆಟೆದು ನಿಲ್ಲುವಂತಹ ತಂಗಾಳಿಗೆ ಯಕ್ಷಾಗಾನದ ಝೇಂಕಾರ
ಮಿಳಿತಗೊಂಡರೆ ರೋಮಗಳು ಮತ್ತಷ್ಟು ಸೆಟೆದು ನಿಲ್ಲಿವುದರಲ್ಲಿ ಅನುಮಾನವಿಲ್ಲ. ಜತೆಗೆ ಹಿರಿಯ
ವಿದ್ವಾಂಸರೂ ಯಕ್ಷಗಾನ ವಾಕ್ ಪ್ರಪಂಚದ<ಮತ್ಸದ್ಧಿಗಳೂ ಆದ ಶ್ರೀ ಪ್ರಭಾಕರ ಜೋಷಿ ಮತ್ತು ವಿದ್ವಾನ್ ಶ್ರೀ ಉಮಾಕಾಂತ್ ಭಟ್ ರವರ
ವಿದ್ವತ್ ಪೂರ್ಣ ಮಾತುಗಾರಿಕೆ ಮಾತ್ರವಲ್ಲ ಪರಂಪರೆಯ ಭಾಗವತಿಕೆಯ, ಯುವ ಪೀಳಿಗೆಯ ಭಾಗವತ ಶ್ರೀ ಬಲಿಪ ಶಿವಶಂಕರರ ಮಾಧುರ್ಯದ
ಭಾಗವತಿಕೆಗೆ ಕಾದು ಕುಳಿತುಕೊಳ್ಳುವ ಆ ತವಕವೇ ಅಹ್ಲಾದನೀಯ ಅನುಭವ.
Subscribe to:
Post Comments (Atom)
ಛಾಯಾಚಿತ್ರ ಕತ್ತರಿಸುವಲ್ಲಿ ಸ್ವಲ್ಪ ಜಾಣ್ಮೆ ತೋರಿಸಿದ್ದರೆ "ಅರೆ, ಚಿಪ್ಪಾರು ಬಲ್ಲಾಳರೂ ಬರ್ತಿದ್ದಾರೋಂತ" ಭ್ರಮಿಸಿಬಿಡುತ್ತಿದ್ದೆ :-)[ಮಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನಾವಧಿಯಲ್ಲಿ ಶಿವರಾಮ ಕಾರಂತರು ನಿಧನರಾಗಿದ್ದರು. ಆದರೆ ಸಮಾರೋಪದಲ್ಲಿ ಕಾರಂತರು ಮಾತಾಡುತ್ತಾರೆ ಎಂದು ಸಂಘಟಕರು ಸಣ್ಣ ಚಾಲಾಕೀ ತೋರಿಸಿ, ಅವರ ಯಾವುದೋ ಭಾಷಣದ ಟೇಪು ಹಾಕಿದ್ದರು!]
ReplyDeleteಅಶೋಕವರ್ಧನ