ಉತ್ತಮ ಕಾರ್ಯಕ್ರಮವೊಂದು ಇತ್ತಿಚೆಗೆ ಅಂದರೆ ದಿನಾಂಕ ೨೮.೦೫.೨೦೧೦ ರಂದು, ನಮ್ಮ ಬರೆಕೆರೆಯ ಮಿತ್ರ ಕೇಶವ ಪ್ರಶಾಂತರವರವರ ಮನೆಯಲ್ಲಿ ಜರಗಿತು, ತ್ರಿಕಾಲ ಪೂಜೆಯ ದೇವತಾರಾಧನೆಯ ಅಂಗವಾಗಿ ಯಕ್ಷಗಾನ ಹಿಮ್ಮೇಳ ಗಾನ ವೈಭವವನ್ನು ಯಕ್ಷಗಾನದ ಹಿರಿಯ ಭಾಗವತತ್ರಯರ ಕಲಾಪ್ರೌಢಿಮೆಗೆ ಸಾಕ್ಷಿಯಾಗುವಂತೆ ಅತ್ಯುತ್ತಮ ಹಿಮ್ಮೇಳದೊಂದಿಗೆ ಕಾರ್ಯಕ್ರಮ ಯೋಜಿಸಿದ್ದರು.. ಎರಡುವಾರ ಮೊದಲೇ ಕೇಶವ ಕರೆ ಮಾಡಿ ಕಾರ್ಯಕ್ರಮದ ಕರೆ ನೀಡಿದ್ದರು. ಬಲಿಪ, ಪದ್ಯಾಣ, ಹೊಳ್ಳ, ಈ ಮೂರು ತ್ರಿಮೂರ್ತಿಗಳು ಇಂದು ಯಕ್ಷಗಾನಲೋಕದ ಹಿರಿಯ ವ್ಯಕ್ತಿಗಳು. ಇವರ ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ನಡೆಯುವುದು ಇದೇನೂ ಹೊಸತಲ್ಲ. ಇಲ್ಲಿ ಹೊಸತು ನಮ್ಮ ಮಿತ್ರರ ಮನೆಯಲ್ಲಿ ಆಗುತ್ತಿರುವುದು, ಮಿತ್ರರು ಮತ್ತವರ ಕುಟುಂಬವರ್ಗದವರು ಇದನ್ನು ಮೊದಲೆ ಯೋಚಿಸಿದ್ದರೋ ಗೊತ್ತಿಲ್ಲ. ಈ ಕಾರ್ಯಕ್ರಮ ನನ್ನ ಮಟ್ಟಿಗೆ ದಿಡೀರ್ ಆಗಿ ನಿರ್ಧರಿತ ಕಾರ್ಯಕ್ರಮ.
ಪದ್ಯಾಣ ಗಣಪಣ್ಣನ ನೇತ್ರ್ ತ್ವದಲ್ಲಿ ಯೋಜಿಸಿದ್ದನ್ನು ಅತ್ಯಂತ ಉತ್ಸಾಹದಲ್ಲಿ ಮಿತ್ರ ಕೇಶವ ಹೇಳಿದಾಗ ಈ ಕಾರ್ಯಕ್ರಮ ಕಳೆದುಕೊಳ್ಳಬಾರದು ಎಂದು ಯೊಚಿಸಿದೆ. 
ಆದರೆ ಎಲ್ಲ ಬಾರಿಯಂತೆ ಈ ಬಾರಿಯೂ ಕಾರ್ಯಕ್ರಮಕ್ಕೆ ಹೋಗಿ ಸವಿಯುವುದು ಕನಸಾಗಿಯೆ ಉಳಿದು ಬಿಟ್ಟಿತು. ವಾರದ ಮಧ್ಯಭಾಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಮಯದ ಅಭಾವದಿಂದ ಹೋಗುವುದು ಸಾಧ್ಯವಾಗದೆ ಹೋಯಿತು. ಈ ನಿರಾಶೆಯ ಮಧ್ಯದಲ್ಲೇ ಅದೆ ದಿನ ಸಾಯಂಕಾಲ ಕೇಶವರಿಗೆ ಕರೆ ಮಾಡಿ ಉತ್ಸಾಹದಿಂದಲೇ ಕೇಳಿದಾಗ ನನ್ನಿಂದಲೂ ಹೆಚ್ಚಿನ ಉತ್ಸಾಹದಿಂದ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ವರದಿ ಒಪ್ಪಿಸಿಬಿಟ್ಟರು. ನಿಜಕ್ಕು ಆದಿನ ನನ್ನಂತಹ ಹಲವು ಯಕ್ಷಗಾನ ಮಿತ್ರರು ಈ ಕಾರ್ಯಕ್ರಮದ ಸವಿಯುನ್ನುಣ್ಣುವುದರಲ್ಲಿ ವಂಚಿತರಾಗಿಬಿಟ್ಟೆವು.
ಆದರೆ ಎಲ್ಲ ಬಾರಿಯಂತೆ ಈ ಬಾರಿಯೂ ಕಾರ್ಯಕ್ರಮಕ್ಕೆ ಹೋಗಿ ಸವಿಯುವುದು ಕನಸಾಗಿಯೆ ಉಳಿದು ಬಿಟ್ಟಿತು. ವಾರದ ಮಧ್ಯಭಾಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಮಯದ ಅಭಾವದಿಂದ ಹೋಗುವುದು ಸಾಧ್ಯವಾಗದೆ ಹೋಯಿತು. ಈ ನಿರಾಶೆಯ ಮಧ್ಯದಲ್ಲೇ ಅದೆ ದಿನ ಸಾಯಂಕಾಲ ಕೇಶವರಿಗೆ ಕರೆ ಮಾಡಿ ಉತ್ಸಾಹದಿಂದಲೇ ಕೇಳಿದಾಗ ನನ್ನಿಂದಲೂ ಹೆಚ್ಚಿನ ಉತ್ಸಾಹದಿಂದ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ವರದಿ ಒಪ್ಪಿಸಿಬಿಟ್ಟರು. ನಿಜಕ್ಕು ಆದಿನ ನನ್ನಂತಹ ಹಲವು ಯಕ್ಷಗಾನ ಮಿತ್ರರು ಈ ಕಾರ್ಯಕ್ರಮದ ಸವಿಯುನ್ನುಣ್ಣುವುದರಲ್ಲಿ ವಂಚಿತರಾಗಿಬಿಟ್ಟೆವು.
ಎಲ್ಲದರ ಮಧ್ಯೆ ಒಂದು ತೃಪ್ತಿ... ಈ ಕಾರ್ಯಕ್ರಮ ಸಂಪೂರ್ಣವಾಗಿ ವೀಡಿಯೊ ದಾಖಲಿಕರಣವಾಗುವುದರಿಂದ ಅಲ್ಪ ಮಟ್ಟಿನ ಆಸ್ವಾದನೆಯನ್ನು ಅನುಭವಿಸುವ ಅವಕಾಶ. ಅದರಂತೆ ಮೊನ್ನೆ ಸೋಮವಾರದಂದು ಕೇಶವ ಹೇಳಿದರು ವೀಡಿಯೊ ಸಿದ್ದವಿದೆ... ಮತ್ತೆ ಮನಸ್ಸು ಕೇಳಲಿಲ್ಲ. ನನ್ನ ಇನ್ನೊರ್ವ ಮಿತ್ರ ಸುಬ್ಬಣ್ಣ ಇದಕ್ಕಾಗಿಯೇ ಕಾದು ಕುಳಿತಿದ್ದರು. ಇಬ್ಬರೂ ಸಾಯಂಕಾಲ ಕೇಶವರ ಮನೆಗೆ ಧಾಳೀ ಇಟ್ಟೇಬಿಟ್ಟೆವು. ಅಲ್ಲಿ ಕೆಲವು ವೀಡಿಯೊ ತುಣುಕು ನೋಡಿದ ಮೇಲೆಯೆ ಮನಸ್ಸಿಗೆ ಸ್ವಲ್ಪ
ಸಮಾಧಾನವಾದದ್ದು.
ಸಮಾಧಾನವಾದದ್ದು.
ಎಲ್ಲವನ್ನು ತಂದು ನನ್ನ ಕಂಪ್ಯೂಟರ್ನಲ್ಲಿ ಹಾಕಿದ ಮೇಲೆ ಎಂದಿನಂತೆ ಒಂದುಸಲ ಸ್ವಲ್ಪ ಸ್ವಲ್ಪ ತುಣುಕಾಗಿ ಸವಿದ ಮೇಲೆ ನನ್ನ ಆಡಿಯೊ ವೀಡಿಯೊ ಕಾರ್ಖನೆಗೆ ಕೆಲಸ ಶುರುವಾಯಿತು. ಹೌದು ಎಲ್ಲವನ್ನು ಸಂಕಲಿಸಿ ಬೇಡದೆ ಇದ್ದ ಭಾಗ ತೆಗೆದು ಫೈಲು ಗಳಸ್ವರಗಳನ್ನು ನೇರ ಒಪ್ಪ ಗೊಳಿಸಿ ಎಲ್ಲದಕ್ಕೂ ಒಂದು ರೂಪಕೊಡುವ ಕೆಲಸ ಶುರುವಾಯಿತು.
ಪದ್ಯಾಣ ಹೊಳ್ಳರ ದ್ವಂದ್ವ ಎಂದರೆ ಮೊದಲು ನೆನಪಿಗೆ ಬರುವುದು ದಶಕದ ಹಿಂದೆ ಸಂಗೀತಾ ರೆಕಾರ್ಡಿಂಗ ಕಂಪೆನಿ ಬಿಡುಗಡೆ ಮಾಡಿದ ಶೇಣಿಯವರು ಕರ್ಣನಾಗಿ ಅರ್ಥಗಾರಿಕೆ ಮೆರೆದ ಕರ್ಣಾವಸಾನ ಧ್ವನಿಸುರುಳಿಯ ಈ ಇಬ್ಬರ ದ್ವಂದ್ವ ಹಾಡುಗಾರಿಕೆ . ಯಕ್ಷಗಾನ ಇತಿಹಾಸದಲ್ಲೆ ಒಂದು ಛಾಪನ್ನು ಒತ್ತಿದ ಕ್ಯಾಸೆಟ್ ಇದು. ಇಲ್ಲಿ ಅದು ಕೆಲವು ಕಡೆ ಮರುಕಳಿಸಿತೇ ಎಂದು ಭಾವಿಸಿಬಿಡುವ ಹಾಗೆ ಪದ್ಯಾಣ ಹೊಳ್ಳರು ಪೂರ್ಣ ಉತ್ಸಾಹಿಗಳಾಗಿದ್ದರೆ.. ಹಿರಿಯ ಬಲಿಪ್ಪಜ್ಜ ಎಂದಿನಂತೆ ಸ್ವರಧಾರೆ ಎರೆಯಲು ಉದ್ಯುಕ್ತರಾಗಿದ್ದರು. ಅದರಲ್ಲೂ ಮೂರುಜನ ಸೇರಿ ಹಾಡಿದ ಕರ್ಣಾವಸಾನದ ಪದಗಳು ಅದ್ಭುತವಾಗಿ ಮೂಡಿಬಂದು ಇಂದಿನ ನನ್ನ ದಿನ ಪೂರ್ಣ ಯಕ್ಷಗಾನ ಮಯವನ್ನಾಗಿಸಿತು,
ಬಲಿಪ್ಪರ ಕೆಲವು ಪೇಟೆಂಟ್ ಪದಗಳು ಮಾರಿಚ ನಿಶಾಚರ,ಪಂಚವಟಿ , ಹಾಗು ಅತಿಕಾಯದ ಪದಗಳು ಈ ಮೊದಲು ಹಲವು ಕಾರ್ಯಕ್ರಮಗಳಲ್ಲಿ ಕೇಳಿದ್ದರೂ ಇಲ್ಲಿ, ಕಟೀಲು ದೇವಾಲಯದ ಮಧ್ಯಾಹ್ನದ ಊಟದ ಸಾರಿನಂತೆ ನಿತ್ಯವೂ ಹೇಗೆ ಹೊಸ ರುಚಿಯನ್ನು ಕೊಡುತ್ತದೋ ಅದೇ ರೀತಿಯಿತ್ತು. ಶುದ್ದ ಪರಂಪರೆಯ ಎಲ್ಲಿಯೂ ರಾಜಿಯಿಲ್ಲದ, ಛಂದೋಬದ್ದ,ರಾಗ ತಾಳಲಯಬದ್ದ ಬಲಿಪ್ಪ ಶೈಲಿ ಎಷ್ಟು ಮೋಹಕ..!!.
ಇನ್ನು ಗದ್ದಾಯುದ್ದದ , ದಕ್ಷಾಧ್ವರ, ಸಹಸ್ರಕವಚ ಮೋಕ್ಷ, ಮುಂತಾದ ಪದಗಳಿಗೆ ತನ್ನದೆ ಛಾಪನ್ನು ಒತ್ತಿದ್ದ ಹೂಳ್ಳರ ಪದಗಳು ಪ್ರತಿಸಲ ಪುನರಾವರ್ತನೆಗೊಳಿಸುವಂತೆ ಮಾಡುತ್ತದೆ.
ಅಗರಿ ಶೈಲಿಯಲ್ಲಿ ಪದ್ಯಾಣ ಹಾಡಿದರೆ ಸ್ವತಃ ಅಗರಿ ಮೈಮೇಲೆ ಬಂದಂತೆ ಹಾಡುವ ಇವರ ಪದಗಳು ಇಂತಹುದೆ ಪ್ರಸಂಗಕ್ಕೆಂದು ಬ್ರಾಂಡ್ ಅಗಿಲ್ಲ. ಸ್ವರದ 
ಏರಿಳೀತದ ಶೈಲಿಯ ಪದ್ಯಾಣ ಗಣಪ್ಪಣ್ಣನ ಪದ್ಯಗಳ ಆಲಾಪನೆ ಶೈಲಿಯೇ ಸುಂದರ.
ಏರಿಳೀತದ ಶೈಲಿಯ ಪದ್ಯಾಣ ಗಣಪ್ಪಣ್ಣನ ಪದ್ಯಗಳ ಆಲಾಪನೆ ಶೈಲಿಯೇ ಸುಂದರ.
ಕಾರ್ಯಕ್ರಮದ ಆರಂಭದಲ್ಲಿ ಪದ್ಯಾಣ ಹೊಳ್ಳರ ದ್ವಂದ್ವದಲ್ಲಿ ಗಣಪತಿ ಸ್ತುತಿ ಆನಂತರ ಬಲಿಪ್ಪರ ಪ್ರಸಿದ್ದ ಪದಗಳಲ್ಲಿ ಒಂದಾದ ಶರಣುತಿರುವಗ್ರ ಶಾಲಿವಾಹಿನಿ ಸಹಜವಾಗಿ ಸುಂದರವಾಗಿತ್ತು
ಭೀಷ್ಮ ವಿಜಯದ ಪರಮೠಷಿ ಮಂಡಲದ ಮಧ್ಯದಿ... ಪದ್ಯಾಣ ಹೊಳ್ಳರ ದ್ವಂದ್ವದಲ್ಲಿ ಮೂಡಿ ಆನಂತರ ಕರ್ಣಾವಸಾನ ಪ್ರಸಂಗದ ಏನು ಸಾರಥಿ... ಸಾಯಕತೊಡುವ ವಿಚಾರ... ಮತ್ತೀತರ ಪದಗಳು ಮೂವರು ಪರಸ್ಪರ ಸಹಭಾಗಿತ್ವದಲ್ಲಿ ಮೊಳಗಿ ಆಷಾಢ ಮಾಸದ ವರ್ಷಧಾರೆಯಂತೆ ಭೋರ್ಗರೆಯಿತು.
ಈ ಕಾರ್ಯಕ್ರಮದಲ್ಲಿ ಹೊಳ್ಳ ಮತ್ತು ಉಪಾಧ್ಯಾಯರ ಜತೆಗಾರಿಕೆ ಮಾತ್ರ ಸಂಪೂರ್ಣವಾಗಿ ಮೆರೆದಾಡಿತು. ಕೆಲವೊಂದು ಅದ್ಭುತ ಪದಗಳು ಮತ್ತೂ ಮತ್ತು ಮೆಲುಕು ಹಾಕುವಂತಿತ್ತು. ಮಧ್ಯಮಾವತಿಯ ಗಂಡು ಸ್ವರದಲ್ಲಿ ಹಾಡಿದ ದಕ್ಷಾಧ್ವರದ ಒಂದುದಿವಸ ತಾನು ಕುಳಿತಿರ್ಪ ಸಭೆಗೆ.. , ಜಯ ಕಂಸಾಸುರ ಮರ್ದನ ಅಲ್ಲಿ ಸೇರಿದ ಮಂದಿಗೆ ಮರೆಯದ ಅನುಭವ ಉಂಟು ಮಾಡಿರಬಹುದು,ಬಲಿಪ್ಪರು ಹಾಡಿದ ..ಅತಿಕಾಯ ಪ್ರಸಂಗದ ಏತಕೆ ಮರುಳಾದೆ ತಾತ... ಮಾರೀಚ ನಿಷಾಚರ... ದಂಡು ಬಂತೈ ರಾಘವನ...ಎಂಬ ಪದಗಳು ನಮಗೆ ಮೈಮನ ಮರೆವಂತೆ ಮಾಡುವುದರಲ್ಲಿ ಅನುಮಾನವಿಲ್ಲ.
ಪದ್ಯಾಣ ಅಗರಿ ಶೈಲಿಯಲ್ಲಿ ಹಾಡಿದ ವಾಮನ ಚರಿತ್ರೆ ಪ್ರಸಂಗದ ಮಣಿದಾತ ನುಡಿದ ಪಾವನವಾದ ತವ ಪಾದ ಅವರ ಅತ್ಯುತ್ತಮ ಪದಗಳಲ್ಲಿ ಒಂದಾಗಿ ಮೂಡಿತು.
ಸುಮಾರು ಮೂರು ಘಂಟೆ ಅವಧಿಯ ಯಕ್ಷಗಾನ ಹಿಮ್ಮೇಳದ ಝೇಂಕಾರ ಮೊಳಗಿಸಿದ ಇವುಗಳನ್ನು ಮೊದಲ ದಿನವೇ ಮೂರು ಬಾರಿ ಕೇಳಿ ನನ್ನ ತೃಷೆಯನ್ನು ನೀಗಿಸಿದೆ ಅಂತಲೇ ಹೇಳಬಹುದು.
ಅತ್ಯಂತ ಶ್ರಮವಹಿಸಿ ಈ ಕಾರ್ಯಕ್ರಮವನ್ನು ನಮ್ಮ ಮಿತ್ರ ಬರೆಕೆರೆ ಕೇಶವ ಹಾಗು ಮನೆಯವರು ಅಯೋಜಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರ ಈ ಕಾರ್ಯಕ್ರಮಕ್ಕೆ ಎರಡುವಾರ ಮೊದಲೇ ಭಾಗವತರು ಹಾಡಬೇಕಾದ ಪದಗಳ ಪಟ್ಟಿ ಸಿದ್ದ
ಪಡಿಸುವಂತೆ ನನ್ನಲ್ಲಿ ಕೇಳಿಕೊಂಡಿದ್ದರು. ಅದರಂತೆ ನನ್ನಲ್ಲಿದ್ದ ಸಂಗ್ರಹಗಳನ್ನೆಲ್ಲಾ ಜಾಲಾಡಿ ನನಗೆ ಅತ್ಯುತ್ತಮವೆನಿಸಿದಂತಹ ಪದಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಸಿದ್ದ ಮಾಡಿ ಕಳುಹಿಸಿದ್ದೆ, ದೊಡ್ಡ ಮನಸ್ಸಿನಿಂದ ಅವುಗಳಲ್ಲಿ ಕೆಲವು ಪದಗಳನ್ನು ಆಯ್ಕೆ ಮಾಡಿ ಹಾಡಿಸಿದ್ದಾರೆ. ಸಾಮಾನ್ಯವಾಗಿ ಹಾಡುವಂತಹ ಪದಗಳಿಗೆ ಬದಲಾಗಿ ಅಪರೂಪಕ್ಕೆ ಹಾದುವಂತಹ ಪದಗಳನ್ನು ಆಯ್ಕೆ ಮಾಡಿ ಪಟ್ಟಿ ಸಿದ್ದ ಮಾಡಿ ಕಳುಹಿಸಿ ಅದರಲ್ಲಿ ಕೆಲವು ಪದಗಳು ಆಯ್ಕೆ ಗೊಂಡು ಹಾಡಲ್ಪಟ್ಟದ್ದು ತುಂಬ ಖುಷಿ ಕೊಟ್ಟಿತು. ಅಪರೂಪಕ್ಕೆ ತಮ್ಮದೆ ಮನೆಯಲ್ಲಿ ನಡೆಯುವ ಕಾರ್ಯಕ್ರಮ, ಹಾಗಾಗಿ ಮನೆಯವರದ್ದೆ ಆದ ಆಶಯಗಳು ಬೇಡಿಕೆಗಳು ಹಲವು ಇರುತ್ತವೆ. ಬೇರೆಲ್ಲೊ ಲೌಡ್ ಸ್ಪೀಕರ್ ನಲ್ಲಿ ದಿನವೂ ನಮಗಿಷ್ಟವಾದ ಹಾಡುಗಳನ್ನು ಕೇಳೀದರೂ ನಮ್ಮದೆ ಮನೆಯ ಪುಟ್ಟ ಟೇಪ್ ರೇಕಾರ್ಡರ್ ನಲ್ಲಿ ಕೇಳುವ ಅನುಭವವೆ ಬೇರೆ. ಹಾಗಾಗಿ ಹಲವು ಇತಿಮಿತಿಗಳ ನಡುವೆ ಅತ್ಯುತ್ತಮ ಎನ್ನಬಹುದಾದ ಹಲವು ಪದಗಳ ಸರಪಣಿ ನಿನಾದವನ್ನು ಕೇಳಿದ ಅನುಭವ ಆಯಿತು.
“ಬರೀ ಪದ ಹೇಳೀದ್ರೆ ಕೇಳ್ಳಿಕ್ಕೆ ಜನ ಸೇರ್ತಾರೆ...ಬರೀ ಅರ್ಥ ಮಾತ್ರ ಅದ್ರೆ ಯಾರು ಸೇರುದಿಲ್ಲ.” ಎಂಬ ಬಲಿಪ್ಪರ ಮಾತಿಗೆ ಪುಷ್ಟಿ ಕೊಡುವಂತೆ ಯಕ್ಷಗಾನ ಹಿಮ್ಮೇಳ ಮಾತ್ರ ಅಧಾರಿತ ಇಂತಹ ಹಿಮ್ಮೇಳ ವೈಭವ ಇತ್ತಿಚೆಗೆ ಬಹಳ ಜನಪ್ರಿಯತೆಯನ್ನು ಗಳಿಸುತ್ತಿದೆ.
ಒಂದು ಉತ್ತಮ ಕಾರ್ಯಕ್ರಮ ನಡೆಸಿ ಅದನ್ನು ಮುದ್ರಿಸಿ, ನಮಗೆಲ್ಲ ಸವಿಯುವಂತೆ ಮಾಡಿದ ಮಿತ್ರ ಕೇಶವ ಹಾಗು ಮನೆ ಮಂದಿಗೆ ತುಂಬು ಹೃದಯದ ಧನ್ಯವಾದಗಳು. ಮೊದಲ ಕಾರ್ಯಕ್ರಮದಿಂದ ಉತ್ಸಾಹಿತರಾದ ಮನೆ ಮಂದಿ ಮುಂದೆ ಯಕ್ಷಗಾನ ಬಯಲಾಟ ಏರ್ಪಡಿಸುವ ಬೃಹದಾಶೆಯನ್ನು ಇಟ್ಟುಕೊಂಡಿದ್ದಾರೆ. ಆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಚೈತನ್ಯವನ್ನು ಈ ಕುಟುಂಬ ವರ್ಗದವರಿಗೆ ಭಗವಂತನು ನೀಡಲಿ,ಹಾಗು ಅದನ್ನು ಕಾಣುವ ಭಾಗ್ಯ ನಮ್ಮದಾಗಲಿ ಎಂದು ಹಾರೈಸೋಣ ಅಲ್ಲವೆ?
good write up.. i missed another great program as usual :(
ReplyDeleteThank you Rajanna for a nice write-up.
ReplyDeleteಒಂದು ಒಳ್ಳೆಯ ಯಕ್ಷ - ಗಾನ -ವೈಭವ ಕ್ಕೆ ಹಾಜರಾಗಲು ಅಸಾಧ್ಯವಾದುದಕ್ಕೆ ವಿಷಾದವಿದೆ . ಆ ಕಾರ್ಯಕ್ರಮದ ಪೂರ್ಣ ವಿಡಿಯೋ ಚಿತ್ರೀಕರಣ ವೀಕ್ಷಿಸಿದ ಮೇಲೆ ಕನಿಷ್ಠ ಅಲ್ಲಿ ಹಾಡಿದ ಪದ್ಯಗಳನ್ನಾದರೂ ಸವಿಯುವ ಅವಕಾಶವಯ್ತಲ್ಲ ಎಂಬ ಸಮಾಧಾನ. ನಿಜವಾಗಿಯೂ ಕೇಶವಣ್ಣ ಒಳ್ಳೆಯ ಕಾರ್ಯಕ್ರಮ ಆಯೋಜಿಸಿ ಯಶಸ್ವಿಯಾಗಿದ್ದಾರೆ . ಅದಕ್ಕಾಗಿ ಕೇಶವಣ್ಣ ಮತ್ತು ಅವರ ತಂಡಕ್ಕೆ ಅಭಿನಂದನೆಗಳು .
ReplyDeleteಕಾರ್ಯಕ್ರಮದ ಬಗ್ಗೆ ಹಲವು ದಿವಸಗಳ ಮೊದಲೇ ಕರೆ ಬಂದಿದ್ದರೂ ಪರೀಕ್ಷಾ ಸಮಯವಾದ್ದರಿಂದ ಹೋಗಲಾಗದೆ ಚಡಪಡಿಸುವ ಪರಿಸ್ಥಿತಿ ಬಂದಿತ್ತು! ಕಾರ್ಯಕ್ರಮದ ಮುನ್ನಾ ದಿನವೂ "ಮಣಿದಾತ ನುಡಿದ ಪಾವನಾದೆ ತವ ಪಾದ " ಪದ್ಯ ಗಣಕೀಕರಿಸಿ ಕಳುಹಿಸುವಾಗಲೂ ಈ ಸಂಕಟವೇ ಇಟ್ಟು. ಆದ್ದರಿಂದಲೇ ಕೇಶವಣ್ಣ ಬೆಂಗಳೂರು ತಲುಪಿದ ತಕ್ಷಣ ರಾಜಣ್ಣನ ಜೊತೆ ಅವರ ಮನೆಗೆ ಧಾವಿಸಿ ಅಲ್ಲಿ ಚಿತ್ರೀಕೃತ ಪದಗಳನ್ನೆಲ್ಲಾ ಗಬಗಬನೆ ನೋಡಿ ದಾಗಲೇ ಮನಸ್ಸಿಗೆ ಸ್ವಲ್ಪ ನೆಮ್ಮದಿ ಆದದ್ದು !! ಈಗ ೧೧ ಸಲ ಕೇಳಿ ಆದ ಮೇಲೆ, ಕೇಳಿದಷ್ಟು ರುಚಿ ಹೆಚ್ಚುವ (ಕುದಿಸಿದಷ್ಟು ರುಚಿ ಹೆಚ್ಚುವ ಮೆಣಸುಕಾಯಿಯಂತೆ !) ಕಾರ್ಯಕ್ರಮ ಆಯೋಜಿಸಿದ ಕೇಶವಣ್ಣ ಮತ್ತು ಅವರ ಮನೆಯವರಿಗೆ ಕೃತಜ್ಞತೆಗಳು . ಮಂದರ ಗಿರಿಯೆಡೆ ... ಪದ ಕೇಳ್ತಾ ಇದ್ದೀರಲ್ಲ ??? ಇದೊಂದೇ ಪದ ಸಾಕು ಕಾರ್ಯಕ್ರಮ ಹೇಗಾಗಿತ್ತು ಎನ್ನುವುದಕ್ಕೆ !! ವಿವರ ರಾಜಣ್ಣ ಹಾಕಿದ್ದರೆ ಓದಿ ಸಂತಸ ಪಡೋಣ ..
ಮೋಹನ ರಾಗ : ಅಷ್ಟ ತಾಳ
ReplyDeleteಮಣಿದಾತ ನುಡಿದ ಪಾ | ವನನಾದೆ ತವಪಾದ | ವನಜ ದರ್ಶನದಿ ಬ್ರಾಹ್ಮಣ ತಿಲಕ | ಘನ ಬ್ರಹ್ಮ ಋಷಿಗಳ | ಅನುಪಮ ತೇಜಗ | ಳಿನಿತೊಂದು | ಕೂಡುತಲೆ ಬಂದಿಹು | ದೆನುತಿಂದು | ತೋರುತಿದೆ ಪ್ರೇಕ್ಷಕ | ಜನಕೆ ನಮ್ಮಯ ಯಾಗ ವಿಧಿವ | ತ್ತೆನಿಸಿತಾದರು ಮನದ ಬಯಕೆಯು | ಧನವೊ ಕನಕವೊ ಮೇದಿನಿಯೋ ಎ | ನುತ ಪೇಳಿದರನಿತರೊಳೀವೆನು || ಪಲ್ಲ || ದನುಜ ತಿಲಕ ವಿರೋ | ಚನ ಸುತ ತವ ಕುಲ | ಕ್ಕನುಗುಣವಾದ ಮಾ | ತನು ಪೇಳಿದೆ | ಘನ ಪ್ರಾಜ್ಞ ನೀ ಭಾರ್ಗ | ವನ ಶಿಷ್ಯನಾದ ಮೇ | ಲೆನಲೇನು | ಶುಭಚರಿತ ಪ್ರಹ್ಲಾ|ದನಿಗಿನ್ನು ಮೊಮ್ಮನು ಹಿರಣ್ಯಾ |ಕ್ಷನು ತಾನು | ಪ್ರಪಿತಾಮಹನು ಹರಿ | ಯನು ಬಗೆಯದಿಹ | ಘನ ಪರಾಕ್ರಮನು | ಆಡಿದ ನುಡಿಗೆ ಶಿರ | ವನು ಕಡಿದು ಕೊಟ್ಟವನು ತವ ಪಿತನು | ಎಂದರಿತು ಬಂದಿಹೆ | ಮನವೊಲಿದು ಕೊಡಲೆನ್ನ ಪದದಲಿ | ಅನಘ ಮೂರಡಿ ಭೂಮಿಯನು ಸಾ | ಕನಿತು ಹೆಚ್ಚಿನದನ್ನು ಬೇಡುವ | ದನುಚಿತವು ಪಾಪಕರ ವಿಪ್ರಗೆ ||೧ ||