ಸತ್ವಯುತ ಕಲೆಗೆ ಭಾಷೆಯ ಪರಿಮಿತಿ ಇರುವುದಿಲ್ಲ. ಯಕ್ಷಗಾನದೊಡನೆ ಕನ್ನಡಕ್ಕೆ ಅವಿನಾಭಾವ ಸಂಬಂಧ ಇದ್ದರೂ ಇದು ಭಾಷೆಯ ಸೀಮೆಯನ್ನು ಮೀರಿ ಹೊಗಿದ್ದನ್ನು ನಾವು ಹಲವು ಸಲ ಕಂಡಿದ್ದೇವೆ. ಮಹಾನ್ ಕಲಾವಿದರು ತಮ್ಮದೇ ಪ್ರತಿಭೆಯಿಂದ ಇದನ್ನು ಸಾಧಿಸಿಯೂ ತೋರಿಸಿದ್ದಾರೆ. ಶಾಸ್ತ್ರೀಯ ಸಂಗೀತದಲ್ಲಿ ಹಾಡು ಕೆಲವೊಂದು ಸಲ ಗೌಣವಾಗಿ ಕೇವಲ ಸಂಗೀತದ ರಾಗ ತಾಳಗಳ ಆಲಾಪನೆಯೇ ಸಂವಹನದ ಜೀವಾಳವಾಗಿಬಿಡುತ್ತದೆ. ಕೋಗಿಲೆ ಹಾಡುವಾಗ ಯಾವುದೇ ಭಾಷೆಗೆ ಸೀಮಿತವಾಗಿರುವುದಿಲ್ಲ. ಅಲ್ಲಿ ವ್ಯಕ್ತವಾಗುವುದು ಸಂಗೀತದ ಆಲಾಪನೆ ಮಾತ್ರ.ಯಾವುದೇ ದೇಶ ಭಾಷೆಯ ಪರಿವೆ ಇಲ್ಲದೆ ಅದು ಹಾಡುತ್ತದೆ.
ರಾಗ ಮಾಧುರ್ಯ ಇಲ್ಲಿ ಕೇಳಬಹುದು
ಇತ್ತೀಚೆಗೆ ದಿನೇಶ ಅಮ್ಮಣ್ಣಾಯರ ಭಾಗವತಿಕೆಯಲ್ಲಿ ಸಿಕ್ಕಿದ ಹಲವು ಯಕ್ಷಗಾನದ ಬಹಳ ಹಳೆಯದಾದ ಧ್ವನಿ ಸುರುಳಿ ಕೇಳುವಾಗ ಇಲ್ಲಿ ಭಾಷೆಯ ಭಾವನೆ ಸ್ಫುರಿಸುವುದೇ ಇಲ್ಲ. ಅಮ್ಮಣ್ಣಾಯರ ಗಾನಸುಧೆ ಎಲ್ಲವನ್ನೂ ಮೀರಿ ಆಲಾಪಿಸತೊಡಗುತ್ತದೆ. ಅದಕ್ಕೆಂದೇ ಹುಟ್ಟಿಕೊಂಡ ಗೋರೆಯವರ ಮದ್ದಲೆ ಜತೆಯಾದರೆ ಅದ್ಭುತ ಲೋಕದೊಳಗೆ ಹೊಕ್ಕಿದ ಅನುಭವವಾಗಿಬಿಡುತ್ತದೆ. ಆಷ್ಟೇನು ಆಕರ್ಷಣೀಯವಲ್ಲದ ಕೃತಕ ತುಳುಪ್ರಸಂಗಗಳ ಧ್ವನಿಸುರುಳಿಗಳು. ಉದಾಸೀನತೆಯಿಂತ ಆಲಕ್ಷ್ಯ ಮನೋಭಾವದಿಂದ ಕೇಳುವುದಕ್ಕಾರಂಭಿಸಿದರೆ ಮತ್ತೆ ಅದರಲ್ಲೇ ತಲ್ಲೀನರಾಗುವ ಅನಿವಾರ್ಯತೆ ಮನಸ್ಸಿಗೆ ಉಂಟಾಗುತ್ತದೆ. ರಾಗ ಮಾಧುರ್ಯವನ್ನು ಯಕ್ಷಗಾನಕ್ಕೆ ಹೇಗೆ ಸೂಕ್ತಗೊಳಿಸಬಹುದು ಎನ್ನುವಾಗ ಅಮ್ಮಣ್ಣಾಯ ಗೋರೆಯ ಜುಗಲ್ಬಂದಿ ಮಾದರಿಯಾಗಿಬಿಡುತ್ತದೆ.
ಹಲಾವಾರು ತುಳು ಪ್ರಸಂಗಗಳ ಧ್ವನಿಸುರುಳಿಗಳನ್ನು ಕೇಳುವಾಗ ಪ್ರಸಂಗದ ದೃಷ್ಟಿಯಿಂದ ಅದು ಮೌಲ್ಯವನ್ನು ಗಳಿಸುವುದೇ ಇಲ್ಲ. ಹೆಚ್ಚಿನವುಗಳು ಚಂದಮಾಮ ಬಾಲಮಿತ್ರದಂತಹ ಅಡುಗೂಲಜ್ಜಿ ಕಥೆಗಳನ್ನು ಹೊಸೆದು ಮಾಡಿದವುಗಳು.ಇನ್ನು ಕೆಲವು ಆ ಕಾಲದ ಟೆಂಟ್ ಮೇಳದ ವೈಭವವನ್ನು ಸಾರಿ ಹೇಳುವ ತುಳು ಕಥಾನಕಗಳು. ಇನ್ನು ಕೆಲವು ಜಾನಪದ ಕಥಾ ಹಂದರವನ್ನು ಬಿಂಬಿಸುವ ಪ್ರಸಂಗಗಳು. ಯಾವುದೇ ಉದ್ದೇಶವನ್ನು ಇಟ್ಟು ಕೊಂಡು ಅವುಗಳನ್ನು ಮಾಡಿದರೂ ಎಲ್ಲವೂ ಈ ಹೀಮ್ಮೇಳದ ನಾದ ಸುಧೆಯಲ್ಲಿ ಗೌಣವಾಗಿಬಿಡುತ್ತದೆ.
ಇವುಗಳನ್ನು ಕೇಳುವಾಗ ಕೆಲವೆಲ್ಲ ಯೋಚನೆಗಳು ಉಂಟಾಗುವುದು ಸಹಜ. ಯಕ್ಷಗಾನವನ್ನು ಗಮನದಲ್ಲಿ ಇಟ್ಟು ನೋಡಿದಾಗ ಇವುಗಳಿಗೆ ಯಾವುದೇ ಮಹತ್ವ ಸಿಗುವುದು ಸಾಧ್ಯವಿಲ್ಲ. ಮುಖ್ಯವಾಗಿ ಪೌರಾಣಿಕ ಪಾತ್ರಗಳಿಗೆ ಇದ್ದಷ್ಟು ಹಿನ್ನೆಲೆಯಾಗಲಿ ಆ ಪಾತ್ರಗಳ ಅರಿವಾಗಲಿ ಕಥಾ ಹಂದರವಾಗಲಿ ತುಳು ಕಾಲ್ಪನಿಕ ಪ್ರಸಂಗಗಳಲ್ಲಿ ಇರುವುದು ಸಾಧ್ಯವಿಲ್ಲ. ಹಾಗಾಗಿ ಕಥೆಯ ಅರಿವನ್ನು ಅಥವಾ ಸನ್ನಿವೇಶವನ್ನು ಇರುವ ಅಲ್ಪ ಸಮಯದಲ್ಲಿ ಕೇಳುಗನಿಗೆ ಉಂಟು ಮಾಡುವುದು ತುಂಬ ಕಠಿಣ. ಪಾತ್ರ ಚಿತ್ರಣವೂ ಹಾಗೆ. ರಾಮ ರಾವಣರನ್ನು ಚಿತ್ರಿಸದಷ್ಟು ಸುಲಭವಾಗಿ ಮತ್ತು ಮಾರ್ಮ್ಪಿಕವಾಗಿ ಈ ಕಾಲ್ಪನಿಕ ಪ್ರಸಂಗದ ಪಾತ್ರಗಳನ್ನು ಕಟ್ಟುವುದು ತುಂಬ ಕಷ್ಟ ಮಾತ್ರವಲ್ಲ ಅದರಲ್ಲಿ ಯಶಸ್ಸನ್ನು ನಿರೀಕ್ಷಿಸುವುದು ಕೂಡ ಸಾಧುವಲ್ಲ. ಹಾಗಾಗಿ ಇಲ್ಲಿ ಹಿಮ್ಮೇಳ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಅಮ್ಮಣ್ಣಾಯ ಗೋರೆಯವರ ಕಲಾನೈಪುಣ್ಯ ಮತ್ತು ಕೈಚಳಕದ ಅರಿವಾಗುವುದು ಅಲ್ಲೇ. ಕೇವಲ ಸಂಗೀತ ಸಾಹಿತ್ಯದ ಜ್ಞಾನ ಮಾತ್ರ ಸಾಕಾಗುವುದಿಲ್ಲ ಅದನ್ನು ಮಂಡಿಸಿ ಸಹ ಕಲಾವಿದರನ್ನು ದುಡಿಸಿಕೊಳ್ಳುವ ಜಾಣ್ಮೆ ಅತ್ಯವಶ್ಯ. ಕಲೆಯ ಒಂದು ಭಾಗವೇ ಈ ಜಾಣ್ಮೆ. ಅದು ಇಲ್ಲಿ ಅದ್ಭುತವಾಗಿ ಹೊಮ್ಮಲ್ಪಡುತ್ತದೆ. ಒಂದಕ್ಕೊಂದು ಮಧುರವಾಗಿ ಬೆಸೆದುಕೊಂಡು ಹೆಣೆಯುವ ಹಿಮ್ಮೇಳ ವೈಭವವೇ, ಮುಮ್ಮೇಳವಾದಂತೆ ಭಾಸವಾಗುತ್ತದೆ.
ರಾಗ ಮಾಧುರ್ಯ ಇಲ್ಲಿ ಕೇಳಬಹುದು
ತುಳು ಪ್ರಸಂಗಗಳು ಯಾವುದೇ ವಿಮರ್ಶೆಗೆ ಒಳಗಾದರೂ ಅಮ್ಮಣ್ಣಾಯರ ಹಾಡುಗಾರಿಕೆ ಇದೆಲ್ಲದಕ್ಕಿಂತ ಭಿನ್ನ. ಡೇರೆ ಮೇಳಗಳ ಕೊರತೆ ಇಲ್ಲಿ ಅಮ್ಮಣ್ಣಾಯರ ಪ್ರತಿಭೆ ಸದ್ವಿನಿಯೋಗವಾಗುವ ಮಹತ್ವದ ಅವಕಾಶವನ್ನು ತಪ್ಪಿಸಿತು ಎಂದೇ ಹೇಳಬೇಕು.

ಅಮ್ಮಣ್ಣಾಯರು ಡೇರೆ ಮೇಳಗಳಿಗೆ ಎಷ್ಟು ಸಲ್ಲುತ್ತಾರೋ ಬಯಲಾಟ ಗಳಿಗೂ ಅಷ್ಟೇ ಸಲ್ಲುತ್ತಾರೆ.. ಅ೦ದರೆ ಬಯಲಾಟಗಳನ್ನೂ ಅದೇ ಮಟ್ಟಕ್ಕೆ ರ೦ಗೇರಿಸಬಲ್ಲ ಭಾಗವತ ಅಮ್ಮಣ್ಣಾಯರು. ಅಮ್ಮಣ್ಣಾಯರ ಪೂರ್ಣ ಪ್ರತಿಭೆಯನ್ನು ದುಡಿಸಿಕೊಳ್ಳುವಲ್ಲಿ ಹಿನ್ನಡೆಯಾದದ್ದಕ್ಕೆ ಡೇರೆ ಮೇಳಗಳ ಕೊರತೆಯ ಜೊತೆಗೆ ಯಕ್ಷಗಾನ ರಸಿಕರ ಔದಾಸೀನ್ಯವೂ ಕಾರಣವೇನೋ..
ReplyDeleteMPrabhakar Joshy to me
ReplyDeleteshow details Mar 16 (1 day ago)
GOOD ATTEMPT. THANK YOU FOR THE INFORMATION.
m p joshy.
On Mon, 14 Mar 2011 13:59:47 +0530 wrote
- Show quoted text -
Hare Rama/Vande Gou Maatharam
ReplyDeleteNamaskara Raj
This is excellent and double excellent - lots of good pleasing colors and excellent/fast buffering really nice songs.
Thank you very much
brgds
slrao/bangalore