ಅವರ ಸಾಧನೆಯ ಅಥವಾ ಕ್ರಿಯೆಯ ಬಗ್ಗೆ ವಿಶ್ಲೇಷಣೆ ಮಾಡುವಷ್ಟು ದೊಡ್ಡವ ನಾನಲ್ಲ. ಅದರೂ ಉಪಾಸನೆಯನ್ನು ಓದಿ ಆದನಂತರ ಮನಸ್ಸಿನ ಅನಿಸಿಕೆ ಹೇಳಿದ್ದರಲ್ಲಿ ತಪ್ಪಿಲ್ಲ ಎಂದೇ ಕೆಲವು ಅನಿಸಿಕೆಗಳು ಮಾತ್ರ ವ್ಯಕ್ತ ಮಾಡುವ ಬಯಕೆ ಇದು. ಆರಂಭದಲ್ಲಿ ಸಂಪ್ರದಾಯದಂತೆ ಹಿರಿಯ ವ್ಯಕ್ತಿಗಳ ಮುನ್ನುಡಿ ಮೆರುಗನ್ನು ನೀಡಿವೆ. ಭಟ್ಟರನ್ನು ಹತ್ತಿರದಿಂದ ಬಲ್ಲ ಮಹನೀಯರ ನುಡಿಗಳನ್ನು ಓದಿದಾಗ ಮುಂದೆ ಓದುವಂತೆ ಪ್ರೇರೇಪಿಸುತ್ತವೆ.ಆತ್ಮ ಕಥೆಯುದ್ದಕ್ಕೂ ಪ್ರಾಮಾಣಿಕತೆ ಮೆರೆವ ತುಡಿತ ಕಾಣುತ್ತದೆ. ಹೃದಯವನ್ನು ಕಲುಕುವ, ಮಾನವ ಸಂಭಂಧಗಳ ಸೆಲೆಗಳು ಸಂವಹನಗಳು ಭಟ್ಟರ ಅನುಭವದ ಗಾಢ ಸಂವೇದನೆಯನ್ನು ಓದುಗನಲ್ಲಿ ಉಂಟುಮಾಡುತ್ತವೆ. ಯಕ್ಷಗಾನ ಕಲಾವಿದನ ವೈಯ್ಯಕ್ತಿಕ ಬದುಕು ಸಾಂಪತ್ತಿಕವಾಗಿ ದುರ್ಭರವೇ. ಎಲ್ಲೋ ಕೆಲವು ಇದಕ್ಕೆ ವಿರುದ್ದವಾದ ನಿದರ್ಶನ ಸಿಗಬಹುದು. ಅದು ತೀರ ದುರ್ಲಭವೇ.

ಬಾಲ್ಯದ ಬಡತನದ ದಿನಗಳು ಅವುಗಳನ್ನು ವಿವರಿಸುತ್ತ, ಕೆಲವು ಘಟನೆಗಳಲ್ಲಿ ಗೋವಿಂದ ಭಟ್ಟರು ಕೌಟುಂಬಿಕವಾಗಲಿ, ಸಾಮಾಜಿಕವಾಗಲಿ ಮನುಷ್ಯ ಸಂಭಂಧಗಳನ್ನು ನವಿರಾಗಿ ಅವರು ಕಂಡು ಕೊಂಡ ರೀತಿಯಲ್ಲಿ ಪ್ರಾಮಾಣಿಕವಾಗಿ ಮುಂದಿಡುತ್ತಾರೆ.ದಾಯಾದಿಗಳೊಂದಿಗೆ ಬೆಳೆದ ಕಳೆದ ಬದುಗು ಬವಣೆಗಳು ಬಹುಶ: ಇದು ಸಾಮನ್ಯವಾಗಿ ಇರುವಂತಹ ವಿಷಯಗಳೇ ಆದರೂ ಭಟ್ಟರು ವಿಶೇಷವಾಗಿ ಘಟಿಸಿದ ಕೆಲವು ಘಟನೆಗಳನ್ನು ಹೇಳುತ್ತಾ ನಮ್ಮ ಮನಸ್ಸಿಗೆ ಇನ್ನು ಹತ್ತಿರದವರಾಗಿಬಿಡುತ್ತಾರೆ. ಘಟನೆಗಳನ್ನು ಓದುತ್ತಿದ್ದಂತೆ, ಮನೆಯಲ್ಲಿ ಜತೆಗೆ ವಾಸಿಸುವ ಕುಟುಂಬದವರಾಗಿಯೋ, ಸಮೀಪದ ಬಂಧುವಾಗಿಯೋ, ಅಥವಾ ಸ್ನೇಹಿತನಾಗಿಯೋ ಭಾಸವಾದರೆ ಅಚ್ಚರಿ ಪಡಬೇಕಿಲ್ಲ. ಭಟ್ಟರನ್ನು ಸಮೀಪದಿಂದ ಬಲ್ಲವರಿಗೆ ಇದು ಅಚ್ಚರಿಯೂ ಆಗಲಾರದು. ಯಕ್ಷಗಾನ ಕಲೆಗೆ ಹೇಗೆ ಹತ್ತಿರವದರೋ ಅದೇ ರೀತಿ ಯಾವುದೇ ವ್ಯಕ್ತಿಗೆ ತುಂಬ ಬೇಗನೆ ಹತ್ತಿರವಾಗಬಲ್ಲರು. ಈ ಕಲೆಯೂ ಅವರಿಗೆ ಸಿದ್ದಿಸಿದೆ. ಹಾಗಾಗಿ ಘಟನೆಯನ್ನು ಮುಂದಿಡುವಲ್ಲಿ ಆ ಗುಣ ಶಿಸ್ತು ಕಾಣಬಹುದು. ಇದರಿಂದಾಗಿ ಪುಸ್ತಕ ಓದುತ್ತಿದ್ದಂತೆ ಭಟ್ಟರ ಮೇಲೆ ಆತ್ಮೀಯ ಗೌರವ ಬೆಳೆದುಬಿಡುತ್ತದೆ.
ಅವರ ಬಾಲ್ಯದ ಕೆಲವು ಘಟನೆಗಳು ಹೃದಯಕ್ಕೆ ಹತ್ತಿರವಾಗಿ ಒಂದು ಕ್ಷಣ ಕಣ್ಣುಗಳನ್ನು ತೇವವನ್ನಾಗಿಸಿವೆ. ಬಾಲ್ಯದಲ್ಲಿ ಮನೆಯಿಂದ ತಪ್ಪಿಸಿಕೊಂಡು ಓಡಿ ಹೋಗಿ ವಿಟ್ಲ ಜಾತ್ರೆಯಲ್ಲಿ ತಂದೆಯ ಕೈಗೆ ಸಿಕ್ಕು ವಿಟ್ಲದಿಂದ ತೆಂದೆಯ ಹೆಗಲ ಮೇಲೆ ಮಲಗಿ ಹೋಗುವಾಗ ಭಟ್ಟರು ತಂದೆಯ ಮಮತೆಯನ್ನು ಸವಿಯುವ ಬಗೆ ತಂದೆ ಭಾವುಕರಾಗಿ ಹೇಳುವ ಮಾತುಗಳನ್ನು ಓದಿದಾಗ ಆಗುವ ಅನುಭವೇ ಬೇರೆ. ಸ್ವತಹ ಅನುಭವಿಸಿ ಅದನ್ನು ನೆನಪಿಸುವ ಭಟ್ಟರ ಅನುಭವ ಹೇಗಿರಬಹುದು.? ತಮ್ಮ ಹುಟ್ಟಿದ ಮೇಲೆ ಅಪ್ಪನ ಹೆಗಲ ಮೇಲೆ ಮಲಗುವ ಭಾಗ್ಯ ಬಂದಿಲ್ಲ.. ಮತ್ತು ಅದನ್ನು ಪುಟ್ಟ ಬಾಲಕನಾಗಿ ಗೋವಿಂದ ಅನುಭವಿಸುವ ಅ ಸಂವೇದನೆ ಹಾಗೇ ಅಪ್ಪ ಮಗನ ನಡುವಿನ ಈ ಸಂಭಂಧ ವ್ಯಕ್ತವಾಗುವುದೇ ಇಂತಹ ಸನ್ನಿವೇಶದಲ್ಲಿ!!!
ಇನ್ನೊದು ಭಾವುಕ ಸನ್ನಿವೇಶ ಅಮ್ಮ ಮತ್ತು ಮಗುವಿನ ನಡುವೆ. ಬದುಕಿನ ಮೊತ್ತ ಮೊದಲ ಸಲ ಮೇಳದ ಪ್ರವಾಸ ಮುಗಿಸಿ ಬರುವ ಬಾಲಕ ಗೋವಿಂದ. ಹೋಗುವಾಗಲೇ ತಾಯಿಯಲ್ಲಿ ಹೇಳಿ ಆಗಿದೆ ವರ್ಷಕ್ಕೆ ಐದು ನೂರು ರೂಪಾಯಿ ಸಂಬಳ ಎಂದು. ಅದರೆ ಬರುವಾಗ ನಿರೀಕ್ಷೆಯಂತೆ ದುಡ್ಡು ಸಿಗದೆ, ಕೊನೆಗೆ ಹೇಗೋ ಮಾಡಿ ಸ್ವಲ್ಪ ದುಡ್ಡು ತಾಯಿಗೆ ಕೊಡಲೆಂದು ಮನೆಗೆ ಬಂದು ತಾಯಿ ಕೈಗೆ ದುಡ್ಡು ಹಾಕುವಾಗ ಮಗನ ಅಗಲಿಕೆಯಿಂದ ಬಳಲಿ ಆ ಮಹಾತಾಯಿ ಅ ದುಡ್ಡಿನ ಕಡೆಗೆ ನೋಡದೆ, ಬಾಚಿ ತಬ್ಬಿಕೊಂಡು ಅಳುವಾಗ ತಾಯಿ ಮಗನ ನಡುವಿನ ಗಾಢವಾದ ಸಂಬಂಧ ತೆರೆದು ಕೊಳ್ಳುತ್ತದೆ. ಓದುಗನ ಕಣ್ಣು ಹನಿ ತುಂಬಿ ಮುಂದೆ ಓದಲಾಗುವುದೇ ಇಲ್ಲ. ಈ ಎರಡು ಸನ್ನಿವೇಶಗಳು ಮನಮುಟ್ಟುತ್ತವೆ. ಗೋವಿಂದಣ್ಣ ಪುಸ್ತಕದ ನಡುವಿಂದ ಎದ್ದು ಬಂದ ಹಾಗೆ ಭಾಸವಾದರೆ ಅಚ್ಚರಿಯಿಲ್ಲ.
ಅನಿವಾರ್ಯತೆಯಿಂದ ಪ್ರತೀ ಕ್ಷೇತ್ರವನ್ನೂ ಆಯ್ಕೆ ಮಾಡಿಕೊಂಡರೂ ಎಲ್ಲೂ ರಾಜಿ ಮಾಡಿಕೊಂಡವರಲ್ಲ. ಎಂದರೆ, ಕಲಾಭಿಮಾನ ಅಥವಾ ಕಲೆಯ ಮೇಲಿನ ಪ್ರೀತಿಯಿಂದ ಯಕ್ಷಗಾನಕ್ಕೆ ಬಂದುದಲ್ಲ, ಕೇವಲ ಬದುಕಿನ ಆರ್ಥಿಕ ಪರಿಸ್ಥಿತಿ ಜೀವನ ನಿರ್ವಹಣೆಗಾಗಿ ವೇಷಧಾರಿಯದದ್ದು.ಹಾಗೆಯೇ ಮನೆಯ ಬಳಿಯಲ್ಲಿ ದೇವಸ್ಥಾನ ನಿರ್ಮಿಸಿದ್ದು ತೀವ್ರವಾದ ಭಕ್ತಿಯಿಂದಲ್ಲ. ಇದನ್ನು ಅವರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ಬಹುಶಃ ಗೋವಿಂದಣ್ಣ ಎಲ್ಲರಿಗೂ ಅತ್ಮೀಯರಾಗುದು ಇಂಥಹ ವಿಶಿಷ್ಟ ಗುಣಗಳಿಂದಲೇ. ಹಾಗೆಂದು ಎಲ್ಲಿಯೂ ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕಾಗಲಿ, ಹಿಡಿದ ಕೆಲಸವನ್ನಾಗಲಿ ಎಂದೂ ಅಸಡ್ಡೆಯಿಂದ ಕಂಡವರಲ್ಲ. ಪ್ರಾಮಾಣಿಕವಾಗಿ ಎಷ್ಟು ಸಾಧ್ಯವೋ ಅಷ್ಟು ಮಾಡಿ ಅವರ ವೈಶಿಷ್ಟ್ಯವನ್ನು ಮೆರೆದಿದ್ದಾರೆ. ಕನಸಿನಲ್ಲೂ ಊಹಿಸಲು ಅಸಾಧ್ಯವಾದ ಕೆಲಸಗಳನ್ನು ತಮ್ಮದೇ ರೀತಿಯಲ್ಲಿ ಸಾಧಿಸಿ ತೋರಿಸಿದ್ದಾರೆ.
ಯಕ್ಷಗಾನ ಕಲಾಸಕ್ತರಿಗೆ ಅಥವಾ ಯಕ್ಷಗಾನ ಕಲಾವಿದ್ಯಾರ್ಥಿಗಳಿಗೆ ಅನೇಕ ಮಾಹಿತಿಯನ್ನು ನೀಡಿದ್ದಾರೆ. ಬಹುಶಃ ಯಕ್ಷಗಾನ ಕೆಲವು ಮಾಹಿತಿಗಳನ್ನು ಸೂಕ್ಷ್ಮವಾಗಿ ಕೆಲವನ್ನು ವಿಸ್ತಾರವಾಗಿ ನೀಡಿದ್ದಾರೆ. ಅತಿ ಹಿರಿಯ ಭಾಗವತರ ಬಗ್ಗೆ ಹೇಳುತ್ತಾ ಅಗರಿ ಮಂಡೆಚ್ಚ ಬಲಿಪ್ಪರ ಬಗ್ಗೆ ಕೆಲವೇ ವಾಕ್ಯದಲ್ಲಿ ಹೇಳಿದ್ದರೆ, ತಮ್ಮ ನೆಚ್ಚಿನ ಕಡತೋಕರ ಬಗ್ಗೆ ಸವಿಸ್ತಾರವಾಗಿ ಅವರ ವಿಶೇಷತೆ ಅರ್ಹತೆ ಮತ್ತು ವೈಖರಿಯನ್ನು ಉಲ್ಲೇಖಿಸಿದ್ದಾರೆ. ಇತರ ಹಿರಿಯ ಭಾಗವತರ ಬಗ್ಗೆ ಇನ್ನು ಸ್ವಲ್ಪ ವಿವರವಾದ ವಿವರಣೆಯ ಓದುಗನ ನಿರೀಕ್ಷೆ ನಿರೀಕ್ಷೆಯಾಗಿಯೇ ಉಳಿಯುತ್ತದೆ. ಗೋವಿಂದ ಭಟ್ಟರಂತಹ ಜ್ಞಾನಿಗಳಿಂದ ಈ ಹಿರಿಯ ಕಲಾವಿದರ ಬಗ್ಗೆ ಅವರ ವಿಶೇಷತೆ ಬಗ್ಗೆ ಇವರು ಕಂಡುಕೊಂಡ ಇವರ ಅನುಭವದ ಬಗ್ಗೆ ಇನ್ನೂ ಉಲ್ಲೇಖವಿರುತ್ತಿದ್ದರೆ?!! ಅಂತ ಅನ್ನಿಸಿಬಿಡುತ್ತದೆ.
ಇಡೀ ಪುಸ್ತಕದಲ್ಲಿ ಉತ್ಪ್ರೇಕ್ಷೆಯಿಲ್ಲದೆ ಭಟ್ಟರು ತಮ್ಮ ನೈಜ ಪ್ರಾಮಾಣಿಕತೆಯನ್ನು ಹೆಜ್ಜೆ ಹೆಜ್ಜೆಗೆ ನಿರೂಪಿಸಿದ್ದಾರೆ. ಪುಸ್ತಕ ಓದಿ ಮುಗಿಸಿದಾಗ ನಮ್ಮ ಭಟ್ಟರ ಬಗ್ಗೆ ಇನ್ನೂ ಅಭಿಮಾನ ಈ ಕಾರಣಕ್ಕಾಗಿಯೇ ಜಾಸ್ತಿಯಾಗುವುದು. ಅವರ ಮೇಲಿನ ಅಭಿಮಾನಕ್ಕೆ ಪೂರಕವಾಗಿ ಮಾತ್ರ ಈ ಲೇಖನ. ಇಷ್ಟನ್ನೂ ಬರೆಯುವ ಅರ್ಹತೆಯಾಗಲಿ ತಿಳುವಳಿಕೆಯಾಗಲಿ ನನಗಿದೆಯೇ ? ಎಂದು ಹಲವು ಸಲ ನನ್ನಲ್ಲೇ ಪ್ರಶ್ನಿಸಿದ್ದೇನೆ. ಖಂಡಿತ ಇವುಗಳು ಯಾವುದೂ ನನ್ನಲ್ಲಿ ಇಲ್ಲ.. ಇರುವುದು ಅವರ ಮೇಲಿನ ಉತ್ಕಟ ಅಭಿಮಾನ ಮಾತ್ರ.
nice review.. even i agree that he has not given out much of details on his famous contemporaries..
ReplyDeletenice write up. since i read one more writeup on same topic and felt that was biased.
ReplyDeleteyou have given your view very nicely. i feel for any person its not possible to put in word all of his experiences. nice review on the book comment
ಉತ್ತಮ ಲೇಖನ ರಾಜಣ್ಣ.
ReplyDeleteಗೋವಿಂದಣ್ಣ ಒಬ್ಬ ಪರಿಪೂರ್ಣ ಯಕ್ಷಗಾನ ಕಲಾವಿದ. ಅವರಂತಹ ಇನ್ನೊಬ್ಬ ಸಾಧಕ ಇರಲಾರ ಎಂದರೆ ಅದು ಅತಿಶಯೋಕ್ತಿ ಆಗದು. ಹಾಗೆಯೇ, ಅವರಷ್ಟು ಕಷ್ಟ ಬಂದ ವ್ಯಕ್ತಿಯು ಸಹ ಇನ್ನೊಬ್ಬ ಇರಲಾರ. ಹುಟ್ಟಿದಾರಭ್ಯ ೫೦-೬೦ ವರ್ಷಗಳ ಕಾಲ ಅವರು ಬಂದ ಕಷ್ಟಗಳನ್ನು ನೆನೆಸಿಕೊಂಡರೆ ನಮ್ಮಂತವರು ಯಾವತ್ತೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆವು.
ಇನ್ನು ಅವರ ಪುಸ್ತಕದ ಬಗ್ಗೆ. ಇದು ಅವರ ಜೀವನ ಚರಿತ್ರೆ, ಹಾಗಾಗಿ ಯಕ್ಷಗಾನದ ಬಗ್ಗೆ ಅವರು ಜಾಸ್ತಿ ಉಲ್ಲೇಖಿಸದಿರಬಹುದು ಎಂದು ನನ್ನ ಅಭಿಪ್ರಾಯ. ಅವರು ಯಕ್ಷಗಾನದ ಬಗ್ಗೆ ಬರೆಯುವುದಿದ್ದರೆ ಬಹುಶ ಇನ್ನೊದು ಪುಸ್ತಕ (ಒಂದು ದೊಡ್ಡ ಗ್ರಂಥ) ವನ್ನೇ ಬರೆಯಬಹುದು. ನನಗೆ ಪುಸ್ತಕವನ್ನು ಓದಿ ಅತ್ಯಂತ ಆನಂದವಾಯಿತು. ಕೆಲವು ಸಂದರ್ಭಗಳಲ್ಲಿ ಕಣ್ಣಂಚಿನಿಂದ ನೀರು ಇಳಿಯಿತು. ಕೊನೆಗೊಂದು ಸಮಾಧಾನ. ಇಂಥಹ ಸಾಧಕನ ಜೀವನ ಇನ್ನಾದರೂ ಸುಲಭವಾಗಿ ಸಾಗಬಹುದು/ಸಾಗುತ್ತಿದೆ ಎಂದು.
ಗೋವಿಂದಣ್ಣ ಇನ್ನೂ ಹಲವರು ವರ್ಷ ನಮಗೆಲ್ಲ ರಸದೌತಣ ನೀಡಲು ನಮ್ಮೊಂದಿಗೆ ಇರಲಿ, ದೇವರು ಅವರಿಗೆ ಹಾಗು ಅವರ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯ ನೀಡಲಿ ಎಂದು ಹಾರೈಸುತ್ತೇನೆ.
Please update your blog with more articles on yakshagana
ReplyDelete'ಯಕ್ಷೋಪಾಸನೆ'ಯ ಕುರಿತು ನಾಲ್ಕು ಮಾತು
ReplyDeletehttp://manoratha.blogspot.com/2009/05/blog-post.html