ಅಂದು ಒಂದು ಭಾನುವಾರದ ಬೆಳಗಿನ ಸಮಯ. ಎಂದಿನಂತೆ ನಮ್ಮಲ್ಲಿ ಭಾನುವಾರವನ್ನು ಚಪ್ಪರಿಸಿ ನಿಧಾನಕ್ಕೆ ಸವಿಯುವ ಒಂದು ಪ್ರಕ್ರಿಯೆ. ಅಂದರೆ? ಹೌದು ಭಾನುವಾರವೆಂದರೆ ಈಗೀಗ ಹಾಗೆ ಅದು ಮುಗಿಯಬಾರದು? ಅದು ಮುಗಿಯುವ ಮೊದಲು ಅದನ್ನು ಸವಿ ಸವಿಯಾಗಿ ಸವಿಯುವ ಪ್ರಕ್ರಿಯೆ. ಹಲವರು ಅಂದು ತಡವಾಗಿ ಏಳುವುದು ಹಾಗೇ ಅಧಿಕ ನಿದ್ರೆಯನ್ನು ಸವಿಯುವ ಚಪಲ. ಹಾಗಾಗಿ ಗಂಟೆ ೮.೩೦ ಆದರೂ ಹಾಸಿಗೆ ಬಿಟ್ಟೇಳದ ಜಡತ್ವದ ಮಂಪರು ನಿದ್ದೆಯಲ್ಲಿ ಮುಳುಗಿದ್ದಾರೆ. ನನಗೆ ಈ ಭಾನುವಾರ ಎಂದು ನನ್ನ ಬೆಳಗಿನ ಚಟುವಟಿಕೆಯಲ್ಲಿ ವೆತ್ಯಾಸ ಮಾಡುವ ಮನಸ್ಸಿಲ್ಲ. ದಿನ ನಿತ್ಯದ ಗಡಿಬಿಡಿಯ ಬೆಳಗಿನ ಚಟುವಟಿಕೆ ಮಾಡುವುದಕ್ಕೆ ತುಸು ನಿರಾಳ ಅಷ್ಟೇ. ಹಾಗಾಗಿ ಬೆಳಗಿನ ಆವಶ್ಯಕ ಸಂಧ್ಯಾದಿ ನಿತ್ಯ ಕರ್ಮಗಳನ್ನು ಮಾಡಿ ಉಪಾಹಾರ ಸೇವಿಸುತ್ತಿದ್ದೆ. ಆಗ ನೋಡಿ ಹತ್ತಿರದ ಮನೆಯ ಓರ್ವ ಮಹಿಳೆ ಮನೆಗೆ ಬಂದರು.ಅಪರಿಚಿತರೇನು ಅಲ್ಲ. ಮುಗುಳು ನಗೆಯ ಸ್ವಾಗತ ಎಂದಿನಂತೆ. ನಾನು ಟಿವಿ ಯಲ್ಲಿ ವಾರ್ತೆಗಳನ್ನು ನೋಡುತ್ತಾ ಕುಳಿತಿದ್ದೆ.ಬಂದವರು ನನ್ನೊಂದಿಗೆ ಅದು ಇದು ಕುಶಲ ಮಾತಾಡುತ್ತ ಟಿವಿ ನೋಡುವಲ್ಲಿ ಉತ್ಸುಕಳಾಗಿ ಯಾವುದೋ ಚಾನೆಲ್ ಹಾಕುವಂತೆ ಒತ್ತಾಯಿಸಿದಳು. ನಾನು ಅದರಂತೆ ಆಕೆಗೆ ಬೇಕಾದ ಆಯ್ಕೆಯು ಚಾನೆಲ್ ಹಾಕಿ ನನ್ನ ಪಾಡಿಗೆ ಬೇರೆ ಕೆಲಸದಲ್ಲಿ ಮಗ್ನನಾದೆ. ತುಸು ಸಮಯದ ಬಳಿಕ ನೋಡುತ್ತೇನೆ, ಆ ಮಹಿಳೆ ಭಾವಪರವಶಳಾಗಿ ಟಿವಿಯ ಕಾರ್ಯಕ್ರಮದಲ್ಲಿ ಮಗ್ನಳಾಗಿದ್ದಳು. ತುಸು ಆಶ್ಚರ್ಯದಿಂದ ನೋಡಿದೆ. ಟಿವಿಯಲ್ಲಿ ಯಾವುದೋ ಪೌರಾಣಿಕ ಸೀರಿಯಲ್ ಬರುತ್ತಿತ್ತು.ರಾಮಾಯಣದ ಅಂಶವೊಂದನ್ನು ತೋರಿಸುತ್ತಿದ್ದರು.
ಆಕೆ ಭಾವಪರವಶಳಾಗಿ ಹೋದುದಕ್ಕೆ ಅತಿಶಯವಿಲ್ಲ. ಅದುವೇ ಅತ್ಯಂತ ಉತ್ಕೃಷ್ಟ ಎಂದು ತಿಳಿದುಕೊಂಡು ಭಾವುಕಳಾದುದಲ್ಲಿ ಒಂದು ಸಣ್ಣ ಜಿಜ್ಞಾಸೆ ಮೂಡುತ್ತದೆ. ಆಕೆ ಅದರಲ್ಲಿ ಬರುವ ಸನ್ನಿವೇಶಗಳ ಬಗ್ಗೆ ನನ್ನಲ್ಲಿ ವಿಶ್ಲೇಷಣೆ ಮಾಡಲು ಮುಂದಾದಾಗ ಒಂದು ಪ್ರಶ್ನೆ ಕೇಳಿದೆ. " ಅಮ್ಮ ನೀವು ಯಕ್ಷಗಾನ ನೋಡಿದ್ದೀರಾ?" ವಿಚಿತ್ರವಾಗಿ ಒಂದು ಸಲ ನನ್ನನ್ನು ನೋಡಿದಂತೆ ಅನಿಸಿತು.
" ಒಂದು ಸಲ ನಮ್ಮ ಮನೆ ಹತ್ತಿರದ ದೇವಸ್ಥಾನದಲ್ಲಿ " ನಿರ್ಲಿಪ್ತವಾಗಿ ಉತ್ತರಿಸಿದಳು.
"ಸರಿ ಏನು ಕಥೆ ತೋರಿಸಿದ್ದರು?"
" ಅದೇನೋ ದೇವಿಯ ಕಥೆ. ಮಹಿಷಾಸುರ ಹೀಗೆ ಕೆಲವು ವೇಷ ನೋಡಿದ ನೆನಪು ಚಿತ್ರ ವಿಚಿತ್ರವಪ್ಪ ಅದೇನೂ ಗಲಾಟೆ. ಜಾತ್ರೆ ಹಂಗಿತ್ತು. "
ಆಕೆ ಹೀಗೆ ಹೇಳಿದಾಗ ಒಂದುಸಲ ಪಿಚ್ಚೆನಿದರೂ ಇಲ್ಲಿನ ಹವ್ಯಾಸಿಗಳ ದೇವಿಮಹಾತ್ಮೆ ಪ್ರಸಂಗ ನೋಡಿರಬಹುದು ಎಂದುಕೊಂಡೆ. ಬಹುಶ: ಇದಕ್ಕಿಂತ ಒಳ್ಳೆಯ ಅಭಿಪ್ರಾಯ ನಿರೀಕ್ಷೆ ಮಾಡುವುದು ಕೂಡ ತಪ್ಪಾದೀತು. ಅದರ ಬಗ್ಗೆ ಇಲ್ಲಿ ಬರೆದರೆ ಈಗ ವಿಷಯಾಂತರ ಮಾಡಿದಂತೆ ಆಗುತ್ತದೆ. ಒಂದು ಯಕ್ಷಗಾನ ನೋಡಿ ಎಲ್ಲವೂ ಅದೇ ಎಂದು ಭಾವಿಸುವುದು ಎಷ್ಟೊಂದು ಮೂರ್ಖತನ. ಆದರೆ ಅವಳಿಗೆ ವಿಷಯ ತಿಳಿಸಿದರೂ ಪ್ರಯೋಜನವಿಲ್ಲ ಎಂದು ತಿಳಿದುಕೊಂಡೆ. ಆದರೂ ನಾನು ಹೇಳಿದೆ.
" ನೀವು ಹೇಳುವ ರಾಮಾಯಣದ ಒಂದು ಪಾತ್ರದ ಬಗ್ಗೆ ನಮ್ಮೂರಿನ ತೀರ ಅಶಿಕ್ಷಿತ, ಒಬ್ಬ ಕೂಲಿ ನಾಲಿಗೆ ಹೋಗಿ ಬದುಕುವವನು ಕೂಡ ವಿಶ್ಲೇಷಣೆ ಮಾಡಬಲ್ಲ. ರಾಮಾಯಣದ ತತ್ವಾದರ್ಶಗಳ ಬಗ್ಗೆ ಅಷ್ಟೊಂದು ಜ್ಞಾನಗಳಿಸಿಯಾಗಿರುತ್ತದೆ.ಯಾಕೆಂದರೆ ಅದು ಯಕ್ಷಗಾನದ ಪ್ರಭಾವ ಟಿವಿ ಯಲ್ಲಿ ಬರುವ ಯಾವುದೇ ಪಾತ್ರವಾದರೂ ಮಾತನಾಡುವ ಸಂಭಾಷಣೆಯಾಗಲಿ ಅದು ಪೂರ್ವತಯಾರಿ. ಅದಕ್ಕೆ ಒಂದು ಸ್ಕ್ರಿಪ್ಟ್ ಮೊದಲೇ ಸಿದ್ಧವಾಗಿರುತ್ತದೆ. ಆದರೆ ನಮ್ಮ ಯಕ್ಷಗಾನ ಕಲಾವಿದರು ಪ್ರದರ್ಶಿಸುವ ಸಂದರ್ಭೋಚಿತ ವಾಕ್ಚಾತುರ್ಯಕ್ಕೆ ಯಾವ ಪುಣ್ಯಾತ್ಮ ಸ್ಕ್ರಿಪ್ಟ್ ಸಿದ್ದಮಾಡಿದ್ದಾನೆ. ಬಹುಶ: ಭಗವಂತನೂ ಬೆರಗಾಗುವ ರೀತಿಯಲ್ಲಿ ತಮ್ಮ ಜಾಣ್ಮೆ ಮೆರೆಸುವ ಅದೆಷ್ಟು ಕಲಾವಿದರು ಈ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ."
ನನ್ನ ಕನ್ನಡ ವಿಶ್ಲೇಷಣೆ ಅರ್ಥ ಮಾಡಿಕೊಳ್ಳುವಷ್ಟು ಬೆಂಗಳೂರ ಈ ಕನ್ನಡಿತಿಗೆ ಇಲ್ಲ.ಬಹುಶ: ಬಹುವಂಶ ಆಂಗ್ಲ ಬೆರೆಸಿ ಹೇಳಬೇಕಿತ್ತು ಅಲ್ಲವೇ? ಕೆಲವೊಂದು ಸಲ ಹಾಗೆ ಬಾವಿಯೊಳಗಿನ ಮಂಡೂಕಗಳು ಅವರೇನು ತಿಳಿದುಕೊಂಡಿರುವರೋ ಅದುವೇ ಸತ್ಯ ಲೋಕ ಅಷ್ಟಕ್ಕೆ ಸೀಮಿತ. ಹಾಗಾಗಿ ಅಂತಹವರಲ್ಲಿ ವಾದವೇಕೆ?ಒಂದು ಸಣ್ಣ ನಿದರ್ಶನ ಇಲ್ಲಿದೆ ನೋಡಿ. ಈ ವಿಡಿಯೋದಲ್ಲಿ ಇರುವ ಅರ್ಥಗಾರಿಕೆ ಯಾವನೇ ಒಬ್ಬ ಸಂಭಾಷಣೆಗಾರನಗಲಿ ಚಿತ್ರಕಥಾ ಲೇಖಕನಾಗಲಿ ಸಿದ್ದಪದಿಸಿದ್ದಲ್ಲ. ಬದಲಾಗಿ ಸ್ವಯಂ ಒಬ್ಬ ಇಂತಹ ಮಾತುಗಾರಿಕೆಯ ಹೊನಲನ್ನು ಹರಿಸಬಲ್ಲನಾದರೆ ಅದು ಯಕ್ಷಗಾನದಲ್ಲಿ ಮಾತ್ರ ಸಾಧ್ಯ. ಇಂತಹ ಎಷ್ಟೋ ಎಲೆಮರೆಯ ಕಾಯಿಗಳು ಎಲೆಯಿಂದ ಹೊರಬಾರದೆ ಮರೆಯಲ್ಲೇ ಅಡಗಿದ್ದಾವೆ.
ಈ ಮಾತುಗಾರಿಕೆ ಸೃಷ್ಟಿಸಿದ ಬ್ರಹ್ಮ ಯಾರು? ಇಂದು ಯಾವುದು ಪ್ರಸಿದ್ದಿಗೆ ಬರಬಾರದೋ ಅದು ಪ್ರಸಿದ್ದಿಸುತ್ತದೆ. ಯಾವುದೋ ರುಚಿಸಬಾರದೋ ಅದು ರುಚಿ ಅನಿಸುತ್ತದೆ. ರೋಗವೇ ಆರೋಗ್ಯವಾಗುವ ಸನ್ನಿವೇಶ. ಒಂದು ಹೊತ್ತಿನ ಊಟಕ್ಕೆ ಕಾಲಮಿತಿ ಇಲ್ಲದೆ ಕುಟುಂಬದಿಂದ ದೂರವಿದ್ದು, ಗಂಟೆಗಳ ಕಾಲ ಬಣ್ಣ ಹಚ್ಚಿ ಆರೋಗ್ಯ ಕೆಡಿಸಿಕೊಂದು ವೇದಿಕೆಯಲ್ಲಿ ರಂಜನೆಯನ್ನು ಉಂಟುಮಾಡುವ ಕಲಾವಿದನ ಬದುಕು ಒಂದು ಸಲ ನೋಡಿದರೆ ಸಾಕು, ಟಿವಿ ಸಿನಿಮ ಕಲಾವಿದರ ಬದುಕನ್ನು ಒಂದು ಸಲ ನೋಡಿದರೆ, ಗೊತ್ತಾಗುವುದು ನಮ್ಮ ಪ್ರಾಮುಖ್ಯತೆ ಯಾವ ದಿಶೆಯಲ್ಲಿ ಸಾಗುತ್ತಿದೆ ಎಂದು. ನಮ್ಮ ಕೊಳಚೆ ಜೀವನವನ್ನು ಜಗಜ್ಜಾಹೀರು ಮಾಡಿ, ಭಾರತ ಎಂದರೆ ಇದು ಪ್ರದರ್ಶಿಸಿ,ನಮ್ಮ ಕೊಳಕು ಪ್ರದರ್ಶನಕ್ಕೆ ಆಸ್ಕರ್ ಮನ್ನಣೆ ಸಿಕ್ಕರೆ ಇಡೀ ದೇಶವೇ ಹುಚ್ಚೆದ್ದು ಕುಣಿಯುತ್ತದೆ. ಕೋಟಿ ಗಟ್ಟಲೆ ದುಡ್ಡು ಜೀಬಿಗಿಳಿಸುವ ಕಲಾವಿದರೆಲ್ಲಿ, ತಮ್ಮ ಕುಟುಂಬ ಪೋಷಣೆಗೆ ಇರುಳಿಡೀ ನಿದ್ದೆಗೆಟ್ಟು ನಮ್ಮ ಸಂಸ್ಕೃತಿಯನ್ನು ಪ್ರದರ್ಶಿಸುವ ಈ ಕಲಾವಿದನೆಲ್ಲಿ.? ಒಂದು ವಿಪರ್ಯಾಸವೇ ಸರಿ.
Sooper, Rialistic, channagi bandide, article..
ReplyDeleteNeevu illi helida vishaya kanditha sathya... "koopa mandooka" galige yavude vishayada baggetoo vistharisuva agathya illa.. :)
ReplyDeleteSunnambala avra Vidhura na arthagarike tumba chennagithu..