“ಯಾವಾತನಿಗೆ ಬೇಕುಗಳೇ ಇಲ್ಲವೋ ಆತನಿಗೆ ಬೇಡದವುಗಳೂ ಇಲ್ಲ” ಅಂದರೆ ನಿಂದನೆ ಮತ್ತು ಅಭಿನಂದನೆ ಎರಡು ಸಮಾನವಾಗಿ ಇರುತ್ತದೆ. ಮಾನಸಿಕವಾಗಿ ಇದು ಸ್ಥಿರತೆಯನ್ನು ತೋರಿಸುತ್ತದೆ.ಮೇಲಿನ ಮಾತುಗಳು ಇತ್ತೀಚೆಗಿನ ಕೆಲವು ಸಂದರ್ಭಗಳಲ್ಲಿ ಬಹುವಾಗಿ ನನ್ನನ್ನು ಕಾಡಿತ್ತು.
ಮಿತ್ರರೊಬ್ಬರ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಧಿಕವಾಗಿ ಎಲ್ಲರೂ ಅಪರಿಚಿತರೇ ಅಥವಾ ಹೊಸ ಪರಿಚಿತರು ಎಂದರೆ ಸರಿ. ಹಾಗಾಗಿ ಎಕಾಂಗಿಯಾಗಿಯೆ ಕುಳಿತಿದ್ದೆ. ಆವಾಗ ನನ್ನ ಪರಿಚಯ ಹಿಡಿದು ವ್ಯಕ್ತಿಯೊಬ್ಬರು ಬಂದರು “ ರಾಜ್ ರವರೆ ನಾನು....” ತಮ್ಮ ಪರಿಚಯ ಮಾಡಿಕೊಂಡರು. ಯಾರೆ ಆಗಲಿ ಮಾತು ತೊಡಗಿಸಿದರೆ ನಾನು ಸುಮ್ಮಗೆ ಕುಳಿತಿರುವನಲ್ಲ. ಅಪರಿಚಿತರೇ ಆಗಲಿ ಪರಿಚಿತರಂತೆ ಮಾತು ತೊಡಗಿಸುವುದು ನನ್ನ ಸ್ವಭಾವ. ಎಲ್ಲರಲ್ಲು ಸ್ನೇಹ ಸೌಹಾರ್ದವನ್ನು ಬಯಸುವವನಿಗೆ ಇದರಲ್ಲಿ ಯಾರಾದರೇನು ಎಂಬ ಭಾವ.
ನನ್ನ ಹೆಸರು ಹಿಡಿದು ಕರೆದರಲ್ಲ. ಒಂದು ರೀತಿಯ ಆತ್ಮೀಯತೆ ಆವಾಗಲೇ ಸ್ಪುರಿಸಿತ್ತು.ಇದು ಸಹಜವೂ ಅಲ್ಲವೇ. ಯಾರನ್ನೆ ಆಗಲಿ ಅವನ ವ್ಯಕ್ತಿತ್ವ ಮೂಲ ಸಂಕೇತವಾದ ಹೆಸರನ್ನು ಹಿಡಿದು ಕರೆದಾಗ ಗೌರವ ಬಾರದೆ ಇದ್ದೀತೆ? ಇದು ಯಾರದೇ ವ್ಯಕ್ತಿತ್ವಕ್ಕೆ ನಾವು ಮೊದಲು ಕೊಡುವ ಮನ್ನಣೆ. ಮಾತು ಮುಂದುವರಿಸುತ್ತಾ ಹೇಳಿಕೊಂಡರು. ಅದು ನಮ್ಮ ಬೆಂಗಳೂರು ಯಕ್ಷಗಾನ ಕಾರ್ಯಕ್ರಮದ ಬಗ್ಗೆಯಾಗಿತ್ತು. ನಮಗಂತೂ ಹಳೆಯದಾಗಿ ಬಿಟ್ಟ ಸವಿ ನೆನಪಿನ ಮರುಕಳಿಕೆಯಾಗಿತ್ತು. ಬೇಡ ಬೇಡವೆಂದು ನಾನು ಬಯಸಿದರೂ ಅದೇಕೋ ನನ್ನನ್ನು ಕಂಡಾಗ ಇಂದಿಗೂ ಸಹಜವಾಗಿ ಅದೇ ಪುನರಾವರ್ತನೆಯಾಗುತ್ತದೆ.ಬಹುಶಃ ಇನ್ನೊಂದು ಚಿಗುರು ಮೊಳೆಯದೆ ಇದು ಮರೆಯಾಗದೇನೋ? ಬಹಳ ಒಳ್ಳೆಯದಾಗಿತ್ತು. ಇತ್ತೀಚೆಗೆ ಅಂತಹ ಕಾರ್ಯಕ್ರಮ ನೋಡುವುದೇ ವಿರಳ ಇತ್ಯಾದಿ ಇತ್ಯಾದಿ ಸಹಜವಾಗಿರುವ ಮಾತುಗಳು. ಕೆಲವೊಮ್ಮೆ ನನಗಾಗಿ ಮಾತುಗಳನ್ನು ಆಡುತ್ತಿರುವರೋ ಎಂದು ಮುಜುಗರ ಕೂಡ ಅನುಭವಿಸಿದ್ದಿದೆ.
ಹಾಗಾಗಿ ಈ ಕಾರ್ಯಕ್ರಮದ ಬಗ್ಗೆ ಹೊಗಳಿ ಮಾತಾಡಿದಾಗ ಸ್ಠಿತಪ್ರಜ್ಞತೆಯನ್ನು ಕಾಪಾಡುವ ಬಯಕೆಯಾಗುತ್ತದೆ. ನಿಜಕ್ಕಾದರೆ ನಮ್ಮ ಬಳಗದಲ್ಲಿ ಯಾರೂ ಈ ಹೊಗಳಿಕೆಯನ್ನು ಖಂಡಿತ ಬಯಸಿಲ್ಲ. ಆದರೆ ಹೊಗಳಿಕೆ ಬಂದಾಗ ಮನೋಭಾವಕ್ಕನುಸರಿಸಿ ಖುಶಿ ಪಟ್ಟಿದ್ದೇವೆ. ನನ್ನ ಮಟ್ಟಿಗೆ ಹೇಳುವುದಾದರೆ ಮೇಲಿನ ವಾಕ್ಯ ಹೆಚ್ಚು ಅರ್ಥಪೂರ್ಣವಾಗಿ ಕಾಣುತ್ತದೆ. ಯಾಕೆಂದರೆ ನಾನು ಯಾವುದನ್ನೂ ಹೆಚ್ಚಾಗಿ ಬಯಸಿದವನಲ್ಲ. ನನ್ನ ಅಥವ ನಮ್ಮ ಕಾರ್ಯದ ಬಗ್ಗೆ ನಮಗೆ ಮಾತ್ರ ಗೌರವ ಎಂಬ ಭಾವ ನಾವು ಮೊದಲು ತಳೆದದ್ದು. ನಮ್ಮ ಚಿಂತನೆಗಳಾಗಲಿ ಯೋಜನೆಗಳಾಗಲಿ ಯಾರದೇ ಮೇಲೆ ಹೇರುವ ಅಥವ ಅದನ್ನು ಅವರು ಹಿಂಬಾಲಿಸುವ ಅನಿವಾರ್ಯತೆಯನ್ನು ನಾವು ತಂದಿಡಲೇ ಇಲ್ಲ. ಕೇವಲ ನಮ್ಮ ದೃಷ್ಟಿಕೋನದ ಕಾರ್ಯಕ್ರಮ ಮಾತ್ರವೇ ನಮ್ಮ ಧ್ಯೇಯವಾಗಿತ್ತು. ಹಾಗಾಗಿ ನಾನಂತು ನಮ್ಮ ಕಾರ್ಯಕ್ರಮ ಹೇಗಾಗಿದೆ ಎಂದು ಯಾರಲ್ಲೂ ಕೇಳುವ ಗೋಜಿಗೆ ನಾನು ಹೋಗಲೇ ಇಲ್ಲ. ಇಂದಿಗೂ ಯಾರಲ್ಲೂ ನನಗೆ ಕೇಳುವ ಬಯಕೆಯೂ ಇಲ್ಲ. ನಮ್ಮ ಮನೆಯಲ್ಲಿ ಊಟ ಮಾಡಿದ ನಾವು ಇನ್ನೊಬ್ಬರಿಂದ ನಮ್ಮ ಅಡುಗೆಯ ಬಗ್ಗೆ ಕೇಳಿದಂತೆ ಅನ್ನಿಸಿಬಿಡುತ್ತದೆ. ಮೊದಲೊಮ್ಮೇ ಹೇಳಿದ್ದೆ ನಮ್ಮ ಮನೆ ಅಂಗಳದಲ್ಲಿ ಮಾಡುವಂತೆ ಎಂದು..ಹಾಗಾಗಿ ಬಹು ನಿರೀಕ್ಷೆ ಏನು ಇಲ್ಲದೆ ಅತ್ಯಂತ ಅನಿರೀಕ್ಷಿತವನ್ನೇ ಈ ಕಾರ್ಯಕ್ರಮ ತಂದಿತ್ತು ಮಾತ್ರವಲ್ಲ ತರುತ್ತಾ ಇದೆ.
ಇದನ್ನೇ ಹೇಳುತ್ತ ಹೋದರೆ ಅದು ಅತಿಯಾಗಿ ಬಿಡುವ ಭಯವೂ ಇದೆ. ಇದರ ಬಗ್ಗೆ ನಾವು ಹೇಳಿಕೊಳ್ಳುವುದೂ ಅತಿಯಾಗಿದೆ ಎನೋ ಹಲವು ಸಲ ಅನ್ನಿಸಿದ್ದಿದೆ. ಒಂದು ಕಾರ್ಯಕ್ರಮ ಮಾಡಿ ಅದನ್ನೆ ಹೇಳುತ್ತಾ ಇದ್ದಾರೆ. ಒಂದು ಹತ್ತು ಆಟ ಮಾಡಿ ನೋಡಲಿ ಆಗ ಅದರ ಕಷ್ಟ ಗೊತ್ತಾಗುತ್ತದೆ. ಹೀಗೂ ಪ್ರತಿಕ್ರಿಯೆ ಬಂದದ್ದು ಇದೆ. ಆದರು ಒಂದು ಮಾತು ಇಲ್ಲು ಅನ್ವಯವಾಗುವುದು ಅಂದರೆ, ನಾನಾಗಲಿ ನಮ್ಮ ಬಳಗವಾಗ್ಲಿ ಕಷ್ಟದ ಅರಿವಾಗಬೇಕೆಂದು ಕಾರ್ಯಕ್ರಮ ಮಾಡಿದ್ದಲ್ಲ. ಅಥವಾ ಯಾವೂದೋ ಸ್ಪರ್ಧೆಗಾಗಿ ಮಾಡಿ ಇದಕ್ಕೆ ಸಿಗುವ ಅಂಕಗಳ ಬಗ್ಗೆಯೂ ನಿರೀಕ್ಷೆ ಇರಿಸಲಿಲ್ಲ. ಹಾಗಿರುವಾಗ ಕಷ್ಟ ದ ಅರಿವಾಗುವ ಪ್ರಮೇಯವೆಲ್ಲಿ ಬಂತು. ಇದು ಅತ್ಯಂತ ಸಹಜ ಕಾರ್ಯಕ್ರಮ ಅಷ್ಟೆ. ಹಲವು ಸಲ ಹೇಳಿದ್ದಿದೆ ಯಾವುದೇ ಅತಿಯಾದ ನಿರೀಕ್ಷೆ ಇಲ್ಲ ಎಂದು. ಯಾರನ್ನೇ ಆಗಲಿ ಮೆಚ್ಚಿಸುವುದಕ್ಕಾಗಿ ಮಾಡಿದ್ದಲ್ಲ. ಮೆಚ್ಚಿದ್ದಾರೆ ಎಂದರೆ ನಮ್ಮ ಮನೋಭಾವಕ್ಕೆ ಸರಿಯಾದ ಸ್ಪಂದನೆ ಉಂಟು ಎಂದು ಅರ್ಥವಲ್ಲವೆ.? ಈ ಸ್ಪಂದನವನ್ನೂ ನಾವು ನಿರೀಕ್ಷಿಸಲಿಲ್ಲ. ಇದರ ಬಗ್ಗೆ ಕಟುವಾದ ವಿಮರ್ಶೆ ಇದ್ದರೂ ನಮ್ಮ ಮಟ್ಟಿಗೆ ನಾವು ಸಿದ್ದವಾಗಿ ಸ್ಥಿತಪ್ರಜ್ಞರಾಗಿಯೆ ಇದ್ದೆವು. ನಾವು ಸ್ಪರ್ಧಿಗಳು ಅಲ್ಲವಾದರೂ ನಮ್ಮನ್ನು ಸ್ಪರ್ಧಿಗಳಾಗಿ ಕಂಡರೆ,ಆ ಮೂಲಕ ನಮ್ಮ ಸೋಲು ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದರೆ ಏನು ಮಾಡಬಹುದು. ಪ್ರತಿಯೊಂದನ್ನು ಸದ್ಭಾವನೆಯಿಂದ ಸ್ನೇಹದಿಂದ ಕಂಡಾಗ ಸೋಲು ಗೆಲುವಿನ ಪ್ರಶ್ನೆಯೇ ಇಲ್ಲ. ಸ್ಪರ್ಧೆಯ ಮನೋಭಾವದಿಂದ ಹೆಜ್ಜೆ ಇರಿಸಿದಾಗ, ಎಲ್ಲಿ ಸೋಲಬಹುದೋ ಎಂಬ ಆತಂಕದಿಂದ ಪ್ರತಿಯೊಂದು ಹೆಜ್ಜೆಯೂ ಉದ್ವೇಗ ಭರಿತವಾಗುತ್ತದೆ. ಇದೆಲ್ಲ ಬಹಳ ಸೂಕ್ಷ್ಮವಾದ ವಿಚಾರಗಳು ಅರ್ಥವಾಗುವವರಿಗೆ ಅರ್ಥವಾಗುತ್ತದೆ. ಹಾಗಾಗಿ ವೇದಾಂತದ ಮಾತು ನೆನಾಪಾಗುವುದು ಬೇಕುಗಳು ಇಲ್ಲದವನಿಗೆ ಬೇಡವಾದವುಗಳು ಯಾವುದೂ ಇಲ್ಲ.
ಇಷ್ಟೆಲ್ಲಾ ಇದ್ದರೂ ಇನ್ನೂ ಒಂದು ಮಾತು ಅತಿ ಮುಖ್ಯವಾದದ್ದು ಎಂದರೆ ಸ್ಪರ್ಧಿಯಲ್ಲದವನನ್ನು ಸ್ಪರ್ಧಾಕಣದಲ್ಲಿ ನಿಲ್ಲಿಸಿ ನೋಡು, ಇಲ್ಲಿ ಇಂತಹ ವಾತಾವಾರಣ ಇದೆ ಎಂದೆಲ್ಲ ಭಯಭೀತನನ್ನಾಗಿಸುವುದು. ಇದಕ್ಕೆಲ್ಲ ಕಾರಣ ಮಾನಸಿಕ ಕ್ಲೇಶ. ಜಗತ್ತನ್ನು ನಾವು ನೋಡುವ ದೃಷ್ಟಿಕೋನವನ್ನು ಅನುಸರಿಸಿಕೊಂಡು ಇದೆ. ಹಾಗಾಗಿ, ಅದು ಕೇವಲ ನನ್ನ ಅಂತರಂಗದ ಮಾತು.. ಒಳಾಂತರ್ಯದಿಂದ ಹೇಳುವುದಾದರೆ ನನಗೆ ಇನ್ನೊಂದು ಕಾರ್ಯಕ್ರಮ ಮಾಡುವ ಬಯಕೆಯೇ ಇಲ್ಲ. ಪ್ರತೀಯೊಬ್ಬರ ನಿರೀಕ್ಷೆ ಮಾತ್ರ ಇದಕ್ಕೆ ವಿಪರೀತವಾಗಿ ಇದೆ. ಆದರೂ ನನ್ನ ಮನಸ್ಸು ಹೇಳುವುದಿದನ್ನೇ ಸವಿದ ಸ್ವಾದದ ರುಚಿ ಆರದಿರಲಿ ಎಂದು.
ನಮ್ಮ ಮನೆಯಲ್ಲಿ ಊಟ ಮಾಡಿದ ನಾವು ಇನ್ನೊಬ್ಬರಿಂದ ನಮ್ಮ ಅಡುಗೆಯ ಬಗ್ಗೆ ಕೇಳಿದಂತೆ ಅನ್ನಿಸಿಬಿಡುತ್ತದೆ. sariyaagi hELiddeeri rajanna....
ReplyDeleteheLuvavaru saavira hELtare naventa madlikkagtade... kamale kanninavarige ella haLadiye kaNuvudu...
MR. M PRABHAKARA JOSHI COMMENTED
ReplyDeleteMPrabhakar Joshy to me
show details May 21 (1 day ago)
Good, refrehing write up. congrats.
M P Joshy.