ಒಂದು ಉತ್ತಮ ಸಂವಹನದ ಹಿಮ್ಮೇಳ, ಸಮಶ್ರುತಿಯಯಕ್ಷ ಲಹರಿ. ಹೌದು, ಸದ್ಯ ಕೈ ಸೇರಿದ ಒಂದು ಅಪೂರ್ವ ಧ್ವನಿ ಮುದ್ರಿಕೆ., ನನ್ನ
ಮನದಲ್ಲೇ ಮುದ್ರೆಯನ್ನು ಒತ್ತಿಬಿಟ್ಟಿತು.ಯಕ್ಷಗಾನ ಪರಂಪರೆಯ ರೂವಾರಿ ಶ್ರೀ ಬಲಿಪ ನಾರಯಣ ಭಾಗವತರ ಸಾರಥ್ಯದಲ್ಲಿ ಹೊರಬಂದ ಯಕ್ಷಗಾನ ಸಾಂಪ್ರದಾಯಿಕ ಹಾಡುಗಳ ಧ್ವನಿಮುದ್ರಿಕೆ. ಯಕ್ಷ ಲಹರಿ ಎಂಬ CD.
ಬಲಿಪ್ಪರ ಹೆಸರನ್ನು ಕಂಡಾಗಲೇ ಕೊಟ್ಟ ದುಡ್ಡಿಗೆ ನ್ಯಾಯ ದೊರಕಬಹುದು ಎಂದು ಊಹಿಸಬಹುದು.ಈ ನಿರೀಕ್ಷೆಯನ್ನು ಎಣಿಕೆಗಿಂತ ಮಿಗಿಲಾಗಿ ನಿಜವಾಗಿಸಿದೆ. ನಿಜವಾಗಿಸುವಲ್ಲಿ ಇದಕ್ಕೆ ಬಲಿಪ್ಪರಿಗೆ ಹಿಮ್ಮೇಳದಲ್ಲಿ ಜತೆಯಾದವರು
ಈಗಿನ ಯುವ ಹಾಗು ಭರವಸೆಯ ಚೆಂಡೆ ಮದ್ದಳೆಯ ಹರಿಕಾರ ಶ್ರೀ ಪದ್ಮನಾಭ ಉಪಾದ್ಯಾಯ. ಅಂತೆಯೇ ಸಿಡಿಲಬ್ಬರದ ಚೆಂಡೆಯನ್ನು ಉತ್ತಮ ಶ್ರುತಿ ಬರಿಸಿ ಮೊಳಗಿಸಿದ ಅಡೂರು ಗಣೇಶ್ ರಾವ್ ಅವರ ಚೆಂಡೆ . ಎಲ್ಲಕ್ಕೂ ಒಪ್ಪ ಎನಿಸುವಂತೆ ಅನುಭವಿ ವಾಗ್ಮಿ ಎಂ ಪ್ರಭಾಕರ ಜೋಷಿ. ಇವರ ಸಮರ್ಥ ನಿರೂಪಣೆ. ಎಲ್ಲವೂ ಮೇಳವಿಸಿದೆ ಈ ಮುದ್ರಿಕೆಯಲ್ಲಿ. ಮುದದಿಂದ ನಿನ್ನ ಎಂಬ ಗಣಪಪತಿ ಸ್ತುತಿಯಿಂದ ಆರಂಭದಲ್ಲೇ ಚೆಂಡೆ ಮದ್ದಲೆ ಸಮ ಶ್ರುತಿ ನಮ್ಮನ್ನು ಹಿಡಿದು ಇಡುತ್ತವೆ. ಮೊದಲಿಗೆ ವೀರದಶರಥ ನ್ರಿಪತಿ ಇನಕುಲ ವಾರಿಧಿಗೆ ಪ್ರತಿಚಂದ್ರರು ಎಂಬ ಪದ ಸಾಂಪ್ರದಾಯಿಕ ರೂಪದಲ್ಲಿ ತನ್ನದೇ ಶೈಲಿಯಲ್ಲಿ ಅತಿ ಭಿನ್ನವಾಗಿ ಹಾಡಿದ ಬಲಿಪ್ಪರು ಮೊದಲ ಪದದಿಂದಲೇ ಮನಸ್ಸು ಸೆಳೆದು ಬಿಡುತ್ತಾರೆ. ಮಧ್ಯಮಾವತಿ ರಾಗದ ಈ ಪದವನ್ನು ತೀರ ಭಿನ್ನವಾಗಿ ಪರಂಪರೆಯ ಶೈಲಿ ಪ್ರಕೃತ ಅಪರೂಪವಾಗಿರುವ ರೀತಿಯಲ್ಲಿ ಹಾಡುವಾಗ ಪರಂಪರೆಯ ಶಿಕ್ಷಣ ಕೊಟ್ಟಂತೆ ಭಾಸವಾಗುತ್ತದೆ.ಮುಂದೆ ಕಾರ್ತ್ಯವೀರಾರ್ಜುನ ಪ್ರಸಂಗದ ಕರವಿಲ್ಲದಿಹ ಪುತ್ರನನು ಕಂಡು ಸಾಂಗತ್ಯದಲ್ಲಿ ಹಾಡಿದ ಪದಕೇಳಿದಾಗ ಮನಸ್ಸು ಹಲವು ವರ್ಷ ಹಿಂದಕ್ಕೆ ಓಡುತ್ತದೆ ಅಷ್ಟು ಸಂಪ್ರದಾಯ ಬದ್ದ ಶೈಲಿಯದು. ಎಣಿಕೆ ಬೇಡೆಲೇ ಗುಣಮಣಿಯೆ ಪ್ರಮೀಳೆ ಎಂಬ ಪ್ರಮೀಳಾರ್ಜುನದ ಪದ ಅಂತೆ ಕೆಲವು ಪದಗಳು ಬಲಿಪ್ಪರ ಮೆಚ್ಚಿನ ಪ್ರಸಂಗಗಳಲ್ಲಿ ಒಂದಾದ ಕುಮಾರ ವಿಜಯದ.. ಯಾರಿವಳಮಮಾ ವೈಯ್ಯಾರಿ .. ಎಂಬ ಪದವಂತೂ ಅದ್ಭುತವಾಗಿ ಹಾಡಿದ್ದಾರೆ. ಮತ್ತೆ ಕೆಲವು ಪದಗಳು ಈ ಮೊದಲು ಕೆಲವು ಮುದ್ರಿಕೆಗಳಲ್ಲಿ ಹಾಡಿದ್ದವೆ ಹೀಗಿದ್ದರೂ ಅದು ನವೀನ ರೀತಿಯಲ್ಲೇ ಭಾಸವಾಗುತ್ತವೆ. ವಿಶೇಷವಾಗಿ ಅತಿಕಾಯದ ಬಾಲನೆಲ್ಲಿಗೆ ಪೋದನೈ.ಎಂಬ ಪದ ಹೊಸ ರೂಪದಲ್ಲೇ ಕೇಳುಗರನ್ನು ತಣಿಸುತ್ತವೆ.ಅಂತೆಯೇ ಪಂಚವಟಿಯ ಕೆಲವು ಪದಗಳೂ ತಮ್ಮದೇ ಶೈಲಿಯ ಗಾಢ ಛಾಪನ್ನು ಒತ್ತಿ ಹಾಡಿದ್ದಾರೆ.ಎಲ್ಲ. ಯಕ್ಷಗಾನ ಪರಂಪರೆಯ ಭಾಗವತಿಕೆ ಅದು ಒಂದೇ ಸಲಕ್ಕೆ ರಂಜನೆ ಯನ್ನು ಕೊಡುವುದಿಲ್ಲ ಆದರೆ ಅದನ್ನು ತನ್ಮಯರಾಗಿ ಕೇಳುತ್ತಾ ಮಧುರ ಅನುಭವವನ್ನು ಸಾವಧಾನವಾಗಿ ಅನುಭವಿಸುವ ಮನೋಭಾವ ಇದ್ದರೆ ಅದರ ಅನುಭವವನ್ನು ಸವಿಯುವುದೇ ಒಂದು ಸ್ವರ್ಗ ಸುಖ. ಪ್ರತಿಯೊಂದು ಪದವೂ ಭದ್ರವಾದ ಹಾಗು ಆಳವಾದ ಮುದ್ರೆಯನ್ನು ಬಲಿಪ್ಪರಂತೆ ನಮ್ಮ ಹೃದಯದಲ್ಲಿ ಒತ್ತಿ ಬಿಡುತ್ತವೆ. ಇಂದಿನ ಆಧುನಿಕ ಪ್ರಾಕಾರಗಳು ತಾತ್ಕಾಲಿಕ ಜನಪ್ರಿಯತೆಯನ್ನು ಗಳಿಸಿದರೂ ಅದೆಲ್ಲ ಕೇವಲ ರಂಜನೆ ಅಷ್ಟೇ. ಬಲಿಪ್ಪರ ಯಕ್ಷಗಾನೀಯ ಶೈಲಿ ಕೇಳಿದ ಮೇಲೆ ಮತ್ತೊಮ್ಮೆ ಕೇಳುವಂತೆ ಮಾಡುವಲ್ಲಿ ಪ್ರೇರೇಪಣೆ ಕೊಡುತ್ತದೆ. ಬಲಿಪ್ಪರ ಭಾಗವತಿಕೆಯ ವಿಶೇಷತೆ ಏನಿದೆಯೋ ಸಂಕ್ಷೇಪವಾಗಿ ಇಲ್ಲಿ ಧ್ವನಿಸಿದೆ, ಮಂದಗಮನೆಯ ಪ್ರವಾಹದಂತೆ ತಣ್ಣಗೆ ಹಾಗು ಅಷ್ಟೇ ಪ್ರಭಾವಶಾಲಿ ಮುಟ್ಟಬೇಕಾದ ಗಮ್ಯ ಮುಟ್ಟುವಲ್ಲಿ ವಿಳಂಬವಿಲ್ಲ.
ಇದರಲ್ಲಿನ ಹಿಮ್ಮೇಳದ ಬಗ್ಗೆ ಒಂದೆರಡು ವಾಕ್ಯವಾದರೂ ಉಲ್ಲೇಖಿಸದಿದ್ದರೆ ಅದು ಸೂಕ್ತವೆನಿಸಲಾರದು. ಇಂದಿನ ಉದಯೋನ್ಮುಖ ಮದ್ದಲೆಗಾರರು ಎಲ್ಲಕಿಂತ ಮಿಗಿಲಾಗಿ ಬಿಸಿರಕ್ತದ ಯುವಕ ಇಂದು ಅದ್ಭುತ ಪ್ರತಿಭೆಯನ್ನು ಸಾದರ ಪಡಿಸುತ್ತಿದ್ದಾರೆ. ಅಂತೆಯೇ ಇಲ್ಲಿಯೂ. ಹಿರಿಯರಾದ ಬಲಿಪ್ಪರಿಗೆ ಸಲೀಸಾಗಿ ಮದ್ದಲೆ ಮೇಳೈಸಿದ ಪರಿ ಅತ್ಯುತ್ತಮವಾಗಿದೆ. ಆಲಿಸಿ ಮನ ತಣಿಸಿ ಇನ್ನೂ ಇದೆಯೋ ಎಂದು ಮೊಗೆಮೊಗೆದು ಹೀರುವ ದಾಹವನ್ನು ಬಡಿದೆಬ್ಬಿಸಬಲ್ಲ, ಪಂಚೇಂದ್ರಿಯಗಳ ಇರುವಿಕೆಗೆ ಸಾಕ್ಷಿಯಾಗುವ ಭಾವನೆಯನ್ನು ಕೆರಳಿಸುವ ಈ 
ಸ್ಪಟಿಕದಂತಹ ಸ್ಪಷ್ಟ ತಾಳಗಳು ಚಾಪುಗಳು ಎಲ್ಲವೂ ಪ್ರತಿಭೆಗೆ ತಕ್ಕ ಸಾಕ್ಷಿಯಾಗಿದೆ. ಇವರಿಂದ ಮುಂದೆಯೂ ಕಲಾಕ್ಷೇತ್ರ ಅದ್ಭುತವನ್ನು ನಿರೀಕ್ಷಿಸಬಹುದು. ಇನ್ನು ಚೆಂಡೆ ಮದ್ದಲೆ ಹಾಗು ಭಾಗವತಿಕೆ ಬಲ್ಲಂತಹ ಅನುಭವಿ ಅಡೂರು ಗಣೇಶ್ ರಾವ್ ರವರ ಚೆಂಡೆ ತುಂಬಾ ಲಯಭರಿತವಾಗಿ ಮೂಡಿಬಂದಿದೆ. ಅತ್ಯುತ್ತಮ ಪ್ರತಿಭಾವಂತರು ಇತ್ತೀಚಿಗೆ ಇವರ ಬಡಗು ಶೈಲಿಯ ಮದ್ದಲೆವಾದನವನ್ನು ನಾನು ಕೇಳಿದ್ದೇನೆ. ತಮ್ಮ ಪ್ರತಿಭೆಗೆ ತಕ್ಕಂತೆ ಚೆಂಡೆಯ ಸ್ವರವನ್ನು ಪೋಣಿಸಿದ್ದಾರೆ ಅಂತಲೇ ಹೇಳಬಹುದು. ಉತ್ತಮ ಶ್ರುತಿಯ ಚೆಂಡೆ. ಪಂಚವಟಿಯ ಪದವೊಂದಕ್ಕೆ ಚೆಂಡೆಯ ಛಾಪು ರಿಂಗಣಿಸಿದ್ದು ಅವರ ಸಮಯ ಪ್ರಜ್ಞೆಗೆ ದ್ಯೋತಕವಾಗಿತ್ತು. ಈಗ

ಸ್ಪಟಿಕದಂತಹ ಸ್ಪಷ್ಟ ತಾಳಗಳು ಚಾಪುಗಳು ಎಲ್ಲವೂ ಪ್ರತಿಭೆಗೆ ತಕ್ಕ ಸಾಕ್ಷಿಯಾಗಿದೆ. ಇವರಿಂದ ಮುಂದೆಯೂ ಕಲಾಕ್ಷೇತ್ರ ಅದ್ಭುತವನ್ನು ನಿರೀಕ್ಷಿಸಬಹುದು. ಇನ್ನು ಚೆಂಡೆ ಮದ್ದಲೆ ಹಾಗು ಭಾಗವತಿಕೆ ಬಲ್ಲಂತಹ ಅನುಭವಿ ಅಡೂರು ಗಣೇಶ್ ರಾವ್ ರವರ ಚೆಂಡೆ ತುಂಬಾ ಲಯಭರಿತವಾಗಿ ಮೂಡಿಬಂದಿದೆ. ಅತ್ಯುತ್ತಮ ಪ್ರತಿಭಾವಂತರು ಇತ್ತೀಚಿಗೆ ಇವರ ಬಡಗು ಶೈಲಿಯ ಮದ್ದಲೆವಾದನವನ್ನು ನಾನು ಕೇಳಿದ್ದೇನೆ. ತಮ್ಮ ಪ್ರತಿಭೆಗೆ ತಕ್ಕಂತೆ ಚೆಂಡೆಯ ಸ್ವರವನ್ನು ಪೋಣಿಸಿದ್ದಾರೆ ಅಂತಲೇ ಹೇಳಬಹುದು. ಉತ್ತಮ ಶ್ರುತಿಯ ಚೆಂಡೆ. ಪಂಚವಟಿಯ ಪದವೊಂದಕ್ಕೆ ಚೆಂಡೆಯ ಛಾಪು ರಿಂಗಣಿಸಿದ್ದು ಅವರ ಸಮಯ ಪ್ರಜ್ಞೆಗೆ ದ್ಯೋತಕವಾಗಿತ್ತು. ಈಗ
ವಾಸ್ತವವಾಗಿ ಭಾಗವತರ ಹಾಗು ಮದ್ದಲೆಗಾರರ ತಪ್ಪುಗಳನ್ನು ಮರೆಸುವಂತೆ ಇದನ್ನು ಕೆಟ್ಟ ರೀತಿಯಲ್ಲಿ ಉಪಯೋಗಿಸುವುದನ್ನು ಕಂಡಿದ್ದೇನೆ. ಅಂತ ಹಿಮ್ಮೆಳಗಾರರು ಖಂಡಿತ ಈ ಹಿಮ್ಮೇಳವನ್ನು ಪಠ್ಯ ಕ್ರಮವಾಗಿ ಅಳವಡಿಸಿಕೊಳ್ಳುವುದು ಒಳಿತು. ಮದ್ದಲೆಗೆ ಸಮಾನ ಗೌರವವನ್ನು ಕೊಟ್ಟು ಮದ್ದಲೆಯನ್ನು ಹಿಂಬಾಲಿಸುವ ಅಡೂರು ರೀತಿ ತುಂಬಾ ಸ್ತುತ್ಯರ್ಹ. ಹೀಗಿರುವ ಹಿಮ್ಮೇಳ ಸರಳವಾಗಿದ್ದರೂ ಅದು ಶ್ರೀಮಂತಿಕೆಯನ್ನು ಮೆರೆಸಬಲ್ಲುದು. ಉತ್ತಮ ಹೊಂದಾಣಿಕೆಯ ಚೆಂಡೆ ಮದ್ದಲೆ. ಯಕ್ಷಗಾನ ಕೇವಲ ರಂಜನೆಯಲ್ಲ ಅದರಲ್ಲಿರುವ ಅಂತಃಸತ್ವ ಇಂತವುಗಳಿಂದಲೇ ಮನವರಿಕೆ ಮಾಡಿಕೊಳ್ಳಬೇಕು. ಏನೇನೋ ತಂತ್ರಗಳಿಂದ ತಾತ್ಕಾಲಿಕ ಮನರಂಜನೆಯೇ ಉದ್ದೇಶವಾಗಿರಿಸಿಕೊಂಡು ಹಾಡುವ ಇಂದಿನ ಯುವ ಪೀಳಿಗೆಯ ಭಾಗವತರೂ ಹಾಗು ಅದನ್ನು ಹಿಂಬಾಲಿಸುವ ಹುರಿದುಂಬಿಸುವ ಪ್ರೇಕ್ಷಕರು ಇದನ್ನು ತನ್ಮಯರಾಗಿ ಆಲಿಸಿದಲ್ಲಿ ಪರಂಪರೆಯ ಈ ಹಾಡುಗಾರಿಕೆಯ ಮಹತ್ವ ಮತ್ತು ಅದರ ಸತ್ವ ಆಳವನ್ನು ಮನವರಿಕೆ ಮಾಡಿಕೊಳ್ಳಬಹುದು. ಪರಂಪರೆಯನ್ನು ಪ್ರಶ್ನಿಸುವುದು ಸುಲಭ ಆದರೆ ಅದರ ಸತ್ವ ಪ್ರಶ್ನಾತೀತವಾಗಿದೆ. ಇವತ್ತು ಹಾಡಿದ ಶೈಲಿ ನಾಳೆಗೆ ರುಚಿಸದೆ ಇರಬಹುದು ಆದರೆ ಶುದ್ದ ಸಂಪ್ರದಾಯದ ಒಳ ಹರಿವು ಇಂದಿಗೂ ಪ್ರವಹಿಸುತ್ತಲೇ ಇದೆ.ಅದುದರಿಂದಲೇ .ಬಲಿಪ್ಪರ ಭಾಗವತಿಕೆ ಎಂಬುದು ಅದು ಕರತಾಡನವನ್ನು ಬಯಸುವುದಿಲ್ಲ ನಮ್ಮ ಮನಸ್ಸಿನ ಭಾವನೆಯ ನರಗಳನ್ನು ಮುಷ್ಟಿಯಲ್ಲಿ ಹಿಡಿದು ಹೊರತರುತ್ತದೆ. ಅಂತಹ ಅಂತರಂಗದ ಸೆಳೆತವನ್ನು ಜಾಗ್ರತಗೊಳಿಸುತ್ತದೆ.ಈ ಪರಂಪರೆಯ ಭಾಗವತಿಕೆಗೆ ಚಲಾವಣೆಯ ನಾಣ್ಯವಾಗುವ ತುಡಿತವಿಲ್ಲ . ಅಂತರಂಗದ ಭಾವನೆಗಳೇ ಚಲಾವಣೆಯನ್ನು ಉಂಟುಮಾಡುತ್ತವೆ. ನನ್ನ ಅಪೂರ್ವ ಸಂಗ್ರಹಗಳಲ್ಲಿ ಒಂದಾಗುವ ಈ ಧ್ವನಿ ಮುದ್ರಿಕೆ ನಿರಂತರ ಧ್ವನಿಯನ್ನು ಹೊರಹೊಮ್ಮಿಸಲೆಂದೇ ನನ್ನ ಬಯಕೆ. ಇದರ ನಿರ್ಮಾತೃಗಳು ಹಾಗು ಸಕಲ ಸಹಕಾರವನ್ನು ಇತ್ತವರಿಗೆ ಈ ಮೂಲಕ ಒಂದು ನಮನ. ಕೊನೆಯಲ್ಲಿ ಹಾಡುವ ಪದ ದೇವ..... ನೀನೆ ಗತಿಯೇನುತ ನಾವಿವರೆಗೆ ನಂಬಿರಲು.................. ಉದಯ ರಾಗದಲ್ಲಿ ಹಾಡಿದ ಭಾಮಿನಿ ತುಂಬಾ ಭಾವುಕವರನ್ನಾಗಿ ಮಾಡುತ್ತಾ. ಅರ್ಥಪೂರ್ಣವೆನಿಸಿದೆ.









